ಟೋಕಿಯೊ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ 21 ಗಂಟೆಗಳ ಕಾಲ ಚರ್ಮದ ಮೇಲೆ ಮತ್ತು ಎಂಟು ದಿನಗಳಿಗೂ ಹೆಚ್ಚು ಕಾಲ ಪ್ಲಾಸ್ಟಿಕ್ ಮೇಲೆ ಜೀವಂತವಾಗಿರಬಹುದು. ಇತರ ತಳಿಗಳಿಗೆ ಹೋಲಿಸಿದರೆ ಇದು ವೇಗವಾಗಿ ಹರಡಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.
ಜಪಾನ್‌ನ ಕ್ಯೋಟೋ ಪ್ರಿಫೆಕ್ಚರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ವುಹಾನ್‌ನಲ್ಲಿ ಮೊದಲು ಪತ್ತೆಯಾದ ‘ಸಾರ್ವ್–ಕೋವ್2’ ತಳಿ ಹಾಗೂ ವೈರಸ್‌ನ ಇತರ ಎಲ್ಲ ‘ಕಳವಳಕಾರಿ ತಳಿ’ಗಳ ವಿಶ್ಲೇಷಣೆ ಮಾಡಿದ್ದಾರೆ.
ಇನ್ನೂ ಅಂತಿಮಗೊಳ್ಳದ ವರದಿಯು ‘ಬಯೋಆರ್‌ಎಕ್ಸ್‌ಐವಿ’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ವುಹಾನ್‌ನಲ್ಲಿ ಪತ್ತೆಯಾದ ವೈರಸ್‌ಗಿಂತ, ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮೈಕ್ರಾನ್ ರೂಪಾಂತರ ತಳಿಗಳು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲೆ ಹೆಚ್ಚು ಕಾಲ ಬದುಕುತ್ತವೆ ಎಂದು ಈ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.