ಡೋವರ್ (ಇಂಗ್ಲೆಂಡ್): ಫ್ರಾನ್ಸ್‌ನ ಗಡಿ ಮುಚ್ಚಿರುವುದರಿಂದ ದಕ್ಷಿಣ ಇಂಗ್ಲೆಂಡ್‌ನಲ್ಲಿ ಸಾವಿರಾರು ಟ್ರಕ್ ಚಾಲಕರು ಇದ್ದಲ್ಲಿಯೇ ಸಿಲುಕಿದಾಗ, ಅಲ್ಲಿನ ಭಾರತೀಯ ಸಿಖ್ಖ್ ಸಮುದಾಯವು ಹಸಿದವರಿಗೆ ಆಹಾರವನ್ನು ಒದಗಿಸುವ ಮೂಲಕ ಗಮನ ಸೆಳೆದಿದೆ.
ಈ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬ್ರಿಟನ್‌ನಲ್ಲಿರುವ ಭಾರತೀಯ ಸಿಖ್ಖ್ ಸ್ವಯಂಸೇವಕರು ಪಿಜ್ಜಾ ಸೇರಿದಂತೆ ತಾಜಾ ಆಹಾರವನ್ನು ಒದಗಿಸುವ ಮೂಲಕ ನೆರವಿಗೆ ಧಾವಿಸಿದ್ದಾರೆ.
ಕೋವಿಡ್-19 ಪರೀಕ್ಷೆ ಬಿಗಿಗೊಳಿಸಿರುವುದರಿಂದ 10,000 ಟ್ರಕ್ಕರ್‌ಗಳು ಸಿಕ್ಕಿಹಾಕಿಕೊಂಡರು. ಅವರೆಲ್ಲರೂ ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ಕುಟುಂಬವನ್ನು ಸೇರಲು ಸಾವಿರಾರು ಕಿ.ಮೀ. ದೂರದಿಂದ ಆಗಮಿಸುತ್ತಿದ್ದರು.
ನಾವು ಸಿಖ್ಖ್ ಧರ್ಮದಲ್ಲಿ ಲಂಗರ್ ಎಂಬ ಸಂಪ್ರದಾಯವನ್ನು ಹೊಂದಿದ್ದೇವೆ. ಅದರರ್ಥ ಸಮುದಾಯ ಕಿಚನ್ ಎಂಬುದಾಗಿದೆ ಎಂದು ಆಹಾರ ವಿತರಣೆಗೆ ನೇತೃತ್ವ ವಹಿಸಿರುವ ಖಾಲ್ಸಾ ಏಡ್ ಸಂಸ್ಥಾಪಕರಾದ ರವೀಂದರ್ ಸಿಂಗ್ ರಾಯಿಟರ್ಸ್‌ಗೆ ತಿಳಿಸಿದರು.
ನಾವು ಬ್ರಿಟಿಷ್ ಸಿಖ್ಖರು ಸದ್ಭಾವನೆ ಕೆಲಸವನ್ನು ಅಭ್ಯಾಸ ಮಾಡುತ್ತಿದ್ದೇವೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮನೆಗೆ ಹಿಂತಿರುಗುತ್ತಿದ್ದ ಅವರಿಗೆಲ್ಲರಿಗೂ ಏನು ನಡೆಯುತ್ತಿದೆ ಎಂಬುದು ತಿಳಿದಿರಲಿಲ್ಲ ಎಂದವರು ಹೇಳಿದರು.
ನಮ್ಮ ಸೇವೆಯಿಂದ ಅವರು ಸಂತಸರಾಗಿದ್ದಾರೆ. ಆದರೆ ಕ್ರಿಸ್‌ಮಸ್ ವೇಳೆಗೆ ಮನೆಗೆ ತಲುಪಬಹುದೇ ಎಂಬುದು ಖಚಿತವಾಗಿಲ್ಲ ಎಂದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.