ADVERTISEMENT

ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 452 ಬಲಿ; ಸೋಂಕು ತಗಲಿದವರ ಸಂಖ್ಯೆ 34,717

ಪಿಟಿಐ
Published 23 ಮಾರ್ಚ್ 2020, 5:30 IST
Last Updated 23 ಮಾರ್ಚ್ 2020, 5:30 IST
ಅಮೆರಿಕದಲ್ಲಿ ಕೊರೊನಾ ತಪಾಸಣೆಗಾಗಿ ಕಾದು ನಿಂತಿರುವ ಜನ
ಅಮೆರಿಕದಲ್ಲಿ ಕೊರೊನಾ ತಪಾಸಣೆಗಾಗಿ ಕಾದು ನಿಂತಿರುವ ಜನ    

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 452ಕ್ಕೇರಿದೆ.ಕೋವಿಡ್-19 ರೋಗ ಬಾಧಿತರ ಮಾಹಿತಿಪ್ರಕಟಿಸುವ ವರ್ಲ್ಡೊಮೀಟರ್ ಎಂಬ ವೆಬ್‌ಸೈಟ್ ಪ್ರಕಾರ ಭಾನುವಾರ ಸಂಜೆ ಕೆಂಟುಕಿಯ ರಿಪಬ್ಲಿಕನ್ ಸೆನೆಟರ್ ರಾಂಡ್ ಪೌಲ್ ಸೇರಿದಂತೆ 34,717 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 178 ಮಂದಿ ಗುಣ ಮುಖರಾಗಿದ್ದಾರೆ.

ಸೋಂಕು ದೃಢಪಟ್ಟ ಮೊದಲ ಸೆನೆಟರ್ ಪೌಲ್ ಆಗಿದ್ದು ಈಗ ಕ್ವಾರೆಂಟೈನ್‌ನಲ್ಲಿದ್ದಾರೆ.

ಆದಾಗ್ಯೂ,ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ,ಕ್ಯಾಲಿಫೋರ್ನಿಯಾ ಮತ್ತ ವಾಷಿಂಗ್ಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ ಎಂದಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿ 15,000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು , ಕಳೆದ 24 ಗಂಟೆಗಳಲ್ಲಿ 5,418ಹೊಸ ಪ್ರಕರಣಗಳು ದಾಖಲಾಗಿವೆ. ನ್ಯೂಯಾರ್ಕ್‌ನಲ್ಲಿ 114 ಜನರು ಸಾವಿಗೀಡಾಗಿದ್ದು ಒಂದು ದಿನದಲ್ಲಿ 58 ಪ್ರಕರಣಗಳು ವರದಿಯಾಗಿವೆ.

ಮುಂದಿನ 10 ದಿನಗಳಲ್ಲಿ ನ್ಯೂಯಾರ್ಕ್‌ನಲ್ಲಿ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೂ ಹೊಡೆತ ಬೀಳಲಿದೆ ಎಂದು ಮೇಯರ್ ಬಿಲ್ ಡೇ ಬ್ಲಸಿಯೊ ಹೇಳಿದ್ದಾರೆ.

10 ದಿನಗಳಲ್ಲಿ ವೈದ್ಯಕೀಯ ವಸ್ತುಗಳ ಪೂರೈಕೆ ಕುಂಠಿತವಾಗಲಿದೆ. ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ ಸಿಗದೇ ಇದ್ದರೆ ಜನರು ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.