ADVERTISEMENT

ಭಾರತ ಉದ್ಯಮಿಗೆ ಆಕ್ಸ್‌ಫರ್ಡ್‌ ಗೌರವ

ಪಿಟಿಐ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
ಸೈರಸ್‌ ಪೂನಾವಾಲಾ
ಸೈರಸ್‌ ಪೂನಾವಾಲಾ   

ಲಂಡನ್‌ (ಪಿಟಿಐ):ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಗೌರವ ಪದವಿಗೆ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥಾಪಕ ಮತ್ತು ಅಧ್ಯಕ್ಷಸೈರಸ್‌ ಪೂನಾವಾಲಾ ಪಾತ್ರರಾಗಿದ್ದಾರೆ.

ಬುಧವಾರವಿಶ್ವವಿದ್ಯಾಲಯದ ವಾರ್ಷಿಕ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.ಸೈರಸ್‌ ಅವರ ಸಮಾಜ ಸೇವೆ ಪರಿಗಣಿಸಿ ಈ ಗೌರವ ನೀಡಲಾಗಿದೆ. 1996ರಲ್ಲಿ ಸ್ಥಾಪನೆಯಾದ ಸೆರಮ್‌ ಕಂಪನಿಯು, ಪ್ರಪಂಚದ ಅತಿ ದೊಡ್ಡ ಲಸಿಕೆ ತಯಾರಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಕಂಪನಿಯ ಔಷಧಗಳು 170 ದೇಶಗಳಲ್ಲಿ ಬಳಕೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT