ADVERTISEMENT

ಭಾರತದೊಂದಿಗಿನ ಎಲ್ಲ ವಿವಾದ ಬಗೆಹರಿಸಲು ಕರೆ ನೀಡಿದ ಪಾಕ್ ಸೇನಾ ಮುಖ್ಯಸ್ಥ

ಐಎಎನ್ಎಸ್
Published 2 ಏಪ್ರಿಲ್ 2022, 9:30 IST
Last Updated 2 ಏಪ್ರಿಲ್ 2022, 9:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಇಸ್ಲಾಮಾಬಾದ್: ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಬಗೆಹರಿಸಲು ಮಾತುಕತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಾಜ್ವಾ ಕರೆ ನೀಡಿದ್ದಾರೆ.

ಇಸ್ಲಾಮಾಬಾದ್ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಜಾವೇದ್, ಈ ಕುರಿತು ವಿಷಯ ಪ್ರಸ್ತಾಪಿಸಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಸಂವಾದವನ್ನು ಉದ್ಘಾಟಿಸಿದರು. 'ಸಮಗ್ರ ಭದ್ರತೆ: ಅಂತರರಾಷ್ಟ್ರೀಯ ಸಹಕಾರ ಪುನರ್ ರಚನೆ' ಎಂಬ ವಿಷಯದ ಅಡಿಯಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳನ್ನು ಚರ್ಚಿಸಿದರು.

ಪಾಕಿಸ್ತಾನ, ಅಮೆರಿಕ, ಚೀನಾ, ಬ್ರಿಟನ್, ರಷ್ಯಾ, ಯುರೋಪಿಯನ್ ಒಕ್ಕೂಟ, ಜಪಾನ್, ಫಿಲಿಪೈನ್ಸ್ ಸೇರಿದಂತೆ 17 ದೇಶಗಳ ಅಂತರರಾಷ್ಟ್ರೀಯ ನೀತಿ ತಜ್ಞರು ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.