ADVERTISEMENT

ಪಾಕ್‌ ಸೇನಾ ಬಲ ಕುಂದುವುದಿಲ್ಲ

ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಹೇಳಿಕೆ

ಪಿಟಿಐ
Published 6 ಜೂನ್ 2019, 19:27 IST
Last Updated 6 ಜೂನ್ 2019, 19:27 IST
ಖಮರ್‌ ಜಾವೇದ್‌ ಬಜ್ವಾ
ಖಮರ್‌ ಜಾವೇದ್‌ ಬಜ್ವಾ   

ಇಸ್ಲಾಮಾಬಾದ್‌ (ಪಿಟಿಐ): ’ರಕ್ಷಣಾ ವೆಚ್ಚ ಕಡಿತಗೊಳಿಸುವುದರಿಂದ ಸೇನಾ ಸಾಮರ್ಥ್ಯದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಯೋಧರೊಂದಿಗೆ ಈದ್‌–ಉಲ್‌–ಫಿತ್ರ್‌ ಆಚರಿಸಿದ ಅವರು, ಪಾಕಿಸ್ತಾನ ಸೇನೆ ಸ್ವಯಂ ಪ್ರೇರಿತವಾಗಿ ಮುಂದಿನ ಹಣಕಾಸು ವರ್ಷದಲ್ಲಿ ಬಜೆಟ್‌ನಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಮುಂದಾಗಿರುವ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

’ಯೋಧರ ಜೀವನದ ಗುಣಮಟ್ಟದ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ. ಅಧಿಕಾರಿಗಳ ವೇತನವನ್ನು ಹೆಚ್ಚಿಸದಿರಲು ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ. ಯೋಧರ ವೇತನವನ್ನು ಎಂದಿನಂತೆಯೇ ಹೆಚ್ಚಿಸಲಾಗುವುದು. ಕೆಲವು ವೆಚ್ಚಗಳನ್ನು ಕಡಿಮೆಗೊಳಿಸುವ ಮೂಲಕ ಹಣಕಾಸು ಕೊರತೆಯನ್ನು ನೀಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ದೇಶವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಪಾಕಿಸ್ತಾನ ಸೇನೆ ಸ್ವಯಂ ಪ್ರೇರಿತವಾಗಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.