ADVERTISEMENT

ಪಾಕ್‌ ಧರ್ಮಗುರು ಸೇರಿ 30 ಮಂದಿ ಮೇಲೆ ಬ್ರಿಟನ್‌ ನಿರ್ಬಂಧ

ಪಿಟಿಐ
Published 10 ಡಿಸೆಂಬರ್ 2022, 14:38 IST
Last Updated 10 ಡಿಸೆಂಬರ್ 2022, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಬಲವಂತವಾಗಿ ಮತಾಂತರಿಸಿ, ವಿವಾಹ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಧರ್ಮಗುರುಮೈನ್‌ ಅಬ್ದುಲ್‌ ಹಾಕ್‌ ಸೇರಿದಂತೆ30 ಜನರು ಮತ್ತು ಸಂಸ್ಥೆಗಳ ಮೇಲೆ ಬ್ರಿಟನ್‌ ಸರ್ಕಾರ ನಿರ್ಬಂಧ ವಿಧಿಸಿದೆ.

ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್‌ ಕ್ಲೆವರ್ಲಿ ಅವರು ಶುಕ್ರವಾರ ನಿರ್ಬಂಧಿತರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಲವಂತದ ಮತಾಂತರ, ಕೈದಿಗಳಿಗೆ ಚಿತ್ರಹಿಂಸೆ, ವ್ಯವಸ್ಥಿತ ದೌರ್ಜನ್ಯ ಸೇರಿದಂತೆ ಅನೇಕ ಕುಕೃತ್ಯ ಎಸಗಿದ ಜನರು ಮತ್ತು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಈ ಪಟ್ಟಿಯಲ್ಲಿರುವವರು ಪ್ರವಾಸ ತೆರಳಲು, ಉದ್ಯಮ ಆರಂಭಿಸಲು ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ನಿರ್ಬಂಧ ವಿಧಿಸಲಾಗುತ್ತದೆ. ಈ ಪಟ್ಟಿಯಲ್ಲಿ ರಷ್ಯಾ, ಮ್ಯಾನ್ಮಾರ್‌ ಮತ್ತು ಇರಾನ್‌ ಪ್ರಜೆಗಳೂ ಇದ್ದಾರೆ.

ADVERTISEMENT

ಮುಕ್ತ ಮತ್ತು ಸ್ವತಂತ್ರ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ ಎಂದು ಕ್ಲೆವರ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.