ADVERTISEMENT

ಪಾಕಿಸ್ತಾನ: ಇಮ್ರಾನ್‌ ಖಾನ್‌ ವಿರುದ್ಧ ಸಚಿವ ಆಸಿಫ್‌ ವಾಗ್ದಾಳಿ

ಪಿಟಿಐ
Published 24 ಮಾರ್ಚ್ 2023, 13:35 IST
Last Updated 24 ಮಾರ್ಚ್ 2023, 13:35 IST
ಖ್ವಾಜಾ ಆಸಿಫ್‌
ಖ್ವಾಜಾ ಆಸಿಫ್‌   

ಇಸ್ಲಾಮಾಬಾದ್‌ : ತನ್ನ ಸರ್ಕಾರವನ್ನು ಉರುಳಿಸಲು ಅಮೆರಿಕ ಯತ್ನಿಸಿತ್ತು ಎಂದು ಕಳೆದ ವರ್ಷ ಆರೋಪಿಸಿದ್ದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ನಂತರ ಸಹಾಯ ಕೋರಿ ಆ ರಾಷ್ಟ್ರದ ಮೊರೆ ಹೋಗಿದ್ದರು. ಇದು ಅವರ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಶುಕ್ರವಾರ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರವನ್ನು ಉಳಿಸಿಕೊಳ್ಳಲು ನೆರವು ಕೋರಿ ಪಾಕಿಸ್ತಾನ ತೆಹ್ರೀಕ್‌ – ಎ–ಇನ್ಸಾಫ್‌ (ಪಿಟಿಐ) ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರ ಸಹಾಯಕರೊಬ್ಬರು ಅಮೆರಿಕಕ್ಕೆ ಪತ್ರ ಬರೆದಿದ್ದರು. ಆದರೆ, ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕದ ರಾಜತಾಂತ್ರಿಕರೊಬ್ಬರು ಪಿತೂರಿ ನಡೆಸಿದ್ದರು ಎಂದು ಇಮ್ರಾನ್‌ಖಾನ್‌ ನಂತರ ಆರೋಪಿಸಿದ್ದರು. ಇದು ಅವರ ನಿಗೂಢ ರಾಜಕೀಯ ಪಯಣವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT