ಇಶಾಕ್ ದರ್
ಇಸ್ಲಾಮಾಬಾದ್: ‘ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ಪುನರಾವರ್ತನೆಯಾಗುವ ಸಾಧ್ಯತೆ ದೂರವಿದೆ. ಆದರೆ, ಅಂತಹ ಬೆಳವಣಿಗೆ ನಡೆದರೆ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಲಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಇಶಾಕ್ ದರ್ ಹೇಳಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟರ್ಕಿ, ಇರಾನ್, ಅಜರ್‌ಬೈಜಾನ್ ಮತ್ತು ತಜಿಕಿಸ್ತಾನ ಭೇಟಿಗೆ ಸಂಬಂಧಿಸಿದಂತೆ ಬುಧವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಆದರೆ, ಭಾರತ–ಪಾಕ್ ನಡುವಿನ ಸೇನಾ ಸಂಘರ್ಷ ಪುನರಾವರ್ತನೆಯಾಗುವ ಸಾಧ್ಯತೆ ತೀರಾ ಕ್ಷೀಣಿಸಿದೆ’ ಎಂದರು.
‘ಕದನ ವಿರಾಮಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಎಲ್ಲ ಕ್ರಮಗಳನ್ನು ಕೈಗೊಂಡಿವೆ. ಎರಡೂ ಬದಿಯಲ್ಲಿ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಹಾಗಾಗಿ ಹೊಸ ಸಂಘರ್ಷದ ಸಾಧ್ಯತೆ ಕಡಿಮೆ ಎನ್ನುವುದು ನನ್ನಅಭಿಪ್ರಾಯ. ಆದಾಗ್ಯೂ, ಭಾರತ ಸೇನಾ ಸಂಘರ್ಷ ಮುಂದುವರಿಸಿದರೆ ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು’ ಎಂದು ಹೇಳಿದರು.
ಪಾಕಿಸ್ತಾನ ಭಾರತದೊಂದಿಗೆ ಮಾತುಕತೆಗೆ ಸಿದ್ಧವಿದೆ. ಆದರೆ, ಹತಾಶೆಯಿಂದಲ್ಲ. ಭಯೋತ್ಪಾದನೆ, ಇಂಡಸ್ ಜಲ ಒಪ್ಪಂದ (ಐಡಬ್ಲ್ಯೂಟಿ) ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಂಯೋಜಿತ ಮಾತುಕತೆಯನ್ನು ಪಾಕ್ ಬಯಸುತ್ತದೆ ಎಂದು ಇಷಾಕ್ ದರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.