ADVERTISEMENT

ಪಾಕ್ ಸೇನೆಗೆ ನೂತನ ಮುಖ್ಯಸ್ಥನ ಆಯ್ಕೆ ಮಾಡಿದ ಪ್ರಧಾನಿ ಶೆಹಬಾಜ್ ಷರೀಫ್

ಪಿಟಿಐ
Published 24 ನವೆಂಬರ್ 2022, 7:25 IST
Last Updated 24 ನವೆಂಬರ್ 2022, 7:25 IST
ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್
ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್   

ಇಸ್ಲಾಮಾಬಾದ್:ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರುಗುರುವಾರ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಸೇನಾ ಮುಖ್ಯಸ್ಥ ಜಾವೇದ್ ಬಜ್ವಾ (61) ಅವರು ನವೆಂಬರ್ 29 ರಂದು ನಿವೃತ್ತಿಯಾಗಲಿದ್ದಾರೆ. ಈ ಮೊದಲು ಅವರ ಅವಧಿಯನ್ನು ಮೂರು ವರ್ಷ ವಿಸ್ತರಿಸಲಾಗಿತ್ತು. ಮತ್ತೊಂದು ಅವಧಿ ವಿಸ್ತರಣೆಗೆ ಅವರು ಮನವಿ ಮಾಡಿರಲಿಲ್ಲ.

ಹಾಗೆಯೇಲೆಫ್ಟಿನೆಂಟ್ ಜನರಲ್ ಸಾಹಿರ್ ಶಮ್‌ಶಾದ್ ಮಿರ್ಜಾ ಜಂಟಿ ಸೇನಾ ಸಿಬ್ಬಂದಿ ಕಮಿಟಿಯ ಅಧ್ಯಕ್ಷರನ್ನಾಗಿ ಪ್ರಧಾನಿ ಆಯ್ಕೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.