ADVERTISEMENT

ಐಎಸ್‌ ಮುಖಂಡನ ಹತ್ಯೆ: ಪಾಕ್‌ ಭದ್ರತಾಪಡೆಗಳ ಹೇಳಿಕೆ

ಪಿಟಿಐ
Published 26 ಸೆಪ್ಟೆಂಬರ್ 2021, 20:22 IST
Last Updated 26 ಸೆಪ್ಟೆಂಬರ್ 2021, 20:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕರಾಚಿ: ಬಲೂಚಿಸ್ತಾನದ ಮಸ್ತಂಗ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಯ ಉನ್ನತ ನಾಯಕ ಮುಮ್ತಾಜ್‌ ಅಹ್ಮದ್‌ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿ ತಿಳಿಸಿದ್ದಾರೆ.

ಈತನ ಸುಳಿವು ನೀಡಿದವರಿಗೆ 2 ಲಕ್ಷ ಪಾಕಿಸ್ತಾನಿ ರೂಪಾಯಿ ಬಹುಮಾನ ಘೋಷಿಲಾಗಿತ್ತು. ಈತ 2018ರಲ್ಲಿ ಚುನಾವಣಾ ರ‍್ಯಾಲಿಯೊಂದರ ಮೇಲೆ ನಡೆದ ಆತ್ಮಹತ್ಯಾ ದಾಳಿ ಸೂತ್ರಧಾರಿ ಎಂದು ಹೇಳಲಾಗಿತ್ತು. ಈ ದಾಳಿಯಲ್ಲಿ 128 ಜನರು ಮೃತಪಟ್ಟು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT