ಇಸ್ಲಾಮಾಬಾದ್: ಭಾರತದೊಂದಿಗಿನ ಮಿಲಿಟರಿ ಸಂಘರ್ಷದಲ್ಲಿ ತನ್ನ ಒಂದು ವಿಮಾನಕ್ಕೆ ಸಣ್ಣ ಹಾನಿಯಾಗಿದೆ ಎಂದು ಪಾಕಿಸ್ತಾನ ಸೇನೆ ಭಾನುವಾರ ತಡರಾತ್ರಿ ಒಪ್ಪಿಕೊಂಡಿದೆ.
ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಆಪರೇಷನ್ ಬನ್ಯನ್ - ಉಮ್-ಮರ್ಸೂಸ್ (ಭಾರತದ ವಿರುದ್ಧ ಪಾಕ್ ಸೇನಾ ಕಾರ್ಯಾಚರಣೆ) ತೀರ್ಮಾನದ ಬಗ್ಗೆ ತಿಳಿಸುವುದು ಈ ಪತ್ರಿಕಾಗೋಷ್ಠಿಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನದ ಒಂದು ವಿಮಾನ ಮಾತ್ರ ಸ್ವಲ್ಪ ಹಾನಿಗೊಳಗಾಗಿದೆ ಎಂದಿದ್ದಾರೆ. ಆದರೆ ವಿಮಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.
ಭಾರತೀಯ ಪೈಲಟ್‌ಗಳಲ್ಲಿ ಯಾರೂ ಪಾಕಿಸ್ತಾನದ ವಶದಲ್ಲಿಲ್ಲ. ಇದು ಸುಳ್ಳು ಸುದ್ದಿಯಾಗಿದ್ದು, ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಆಧರಿಸಿವೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.