ADVERTISEMENT

ಇತಿಹಾಸ ತಿರುಚಲು ಭಾರತ ಯತ್ನ: ಪಾಕ್‌

ಪಿಟಿಐ
Published 15 ಅಕ್ಟೋಬರ್ 2025, 13:56 IST
Last Updated 15 ಅಕ್ಟೋಬರ್ 2025, 13:56 IST
<div class="paragraphs"><p>ಪಾಕಿಸ್ತಾನ</p></div>

ಪಾಕಿಸ್ತಾನ

   

ಇಸ್ಲಾಮಾಬಾದ್‌: ವಿಲಕ್ಷಣವಾದ ಮತ್ತು ಬಾಲಿವುಡ್ ಸಿನಿಮಾ ಕತೆಗಳಂತೆ ಇತಿಹಾಸವನ್ನು ತನಗೆ ಬೇಕಾದ ರೀತಿಯಲ್ಲಿ ತಿರುಚಲು ಭಾರತ ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಆರೋಪಿಸಿದೆ.

ಭಾರತ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಾಯ್‌ ಅವರು, ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯು ಸುಮಾರು 100 ಸೈನಿಕರನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನ ಸೇನೆ ಪ್ರತಿಕ್ರಿಯೆ ನೀಡಿದೆ.

ADVERTISEMENT

ಪರಮಾಣು ಶಕ್ತಿಯನ್ನು ಹೊಂದಿರುವ ದೇಶದ ಸೇನಾ ನಾಯಕರು ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ವಿಷಾದನೀಯ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಅನಗತ್ಯವಾಗಿ ಎದೆಯುಬ್ಬಿಸಿಕೊಂಡು, ಅನಪೇಕ್ಷಿತ ಹೇಳಿಕೆ ನೀಡುವುದು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಅಪಾಯವನ್ನು ತರಬಹುದು ಎಂದು ಹೇಳಿದೆ.