ADVERTISEMENT

ಅಫ್ಗಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಗೆ ಪಾಕ್‌ ಸಹಕಾರ: ಅಮೆರಿಕ

ಪಿಟಿಐ
Published 22 ಮೇ 2021, 14:37 IST
Last Updated 22 ಮೇ 2021, 14:37 IST
ಅಫ್ಗಾನಿಸ್ತಾನದ ಸೇನಾ ಯೋಧರಿಗೆ ಅಮೆರಿಕದ ಧ್ವಜ ನೀಡುತ್ತಿರುವ ಸಂಗ್ರಹ ಚಿತ್ರ
ಅಫ್ಗಾನಿಸ್ತಾನದ ಸೇನಾ ಯೋಧರಿಗೆ ಅಮೆರಿಕದ ಧ್ವಜ ನೀಡುತ್ತಿರುವ ಸಂಗ್ರಹ ಚಿತ್ರ   

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಸೇನಾ ಉಪಸ್ಥಿತಿಯನ್ನು ಬಲಪಡಿಸಲು ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಪಾಕಿಸ್ತಾನ ಅವಕಾಶ ಕಲ್ಪಿಸಿದೆ ಎಂದು ಅಮೆರಿಕದ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಪಡೆಯ ಇಂಡೊ ಫೆಸಿಫಿಕ್‌ ವ್ಯವಹಾರಗಳ ವಿಭಾಗದ ಉಪ ಕಾರ್ಯದರ್ಶಿ ಡೇವಿಡ್‌ ಎಫ್‌ ಹೆಲ್ವೆ ಅವರು ಸಂಸತ್ತಿನ ಸೇನಾ ಸೇವೆಗಳ ಸಮಿತಿ ಸದಸ್ಯರಿಗೆ ಈ ಮಾಹಿತಿ ನೀಡಿದ್ದಾರೆ.

‌ಯುದ್ಧದಿಂದ ಬಾಧಿತ ನೆರೆ ರಾಷ್ಟ್ರದಲ್ಲಿ ಶಾಂತಿ ಪ್ರಕ್ರಿಯೆಗೆ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿದೆ. ಈ ಸಂಬಂಧ ಆ ದೇಶದ ಜೊತೆಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನ ಮುಖ್ಯವಾಗಿ ಅದರ ಗುಪ್ತದಳ ವಿಭಾಗ ಐಎಸ್‌ಐ ಹಾಗೂ ಭವಿಷ್ಯದಲ್ಲಿ ಅದು ನಿರ್ವಹಿಸುವ ಪಾತ್ರದ ಕುರಿತು ಖಚಿತವಾಗಿ ವಿವರಿಸಬಲ್ಲಿರಾ ಎಂದು ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಜೋ ಮಚ್ಚಿನ್‌ ಪ್ರಶ್ನಿಸಿದರು.

ಈ ವರ್ಷದ ಸೆಪ್ಟೆಂಬರ್ 11ರಿಂದ ಜಾರಿಗೆ ಬರುವಂತೆ ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳೆದ ತಿಂಗಳು ಪ್ರಕಟಿಸಿದ್ದರು.

ಸೆನೆಟ್‌ ಸೇನೆ ಸೇವೆಗಳ ಸಮಿತಿಯ ಅಧ್ಯಕ್ಷ ಜಾಕ್‌ ರೀಡ್‌ ಅವರು, ಅಧ್ಯಕ್ಷರ ತೀರ್ಮಾನಗಳು ಸ್ಪಷ್ಟವಾಗಿ ಜಾರಿಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.