ADVERTISEMENT

ಪಾಕಿಸ್ತಾನ: ಚೀನಾದ ಮೂರನೇ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಪಿಟಿಐ
Published 10 ಏಪ್ರಿಲ್ 2021, 8:57 IST
Last Updated 10 ಏಪ್ರಿಲ್ 2021, 8:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಚೀನಾಅಭಿವೃದ್ಧಿಪಡಿಸಿರುವ ಮೂರನೇ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಪಾಕಿಸ್ತಾನ ಅನುಮೋದನೆ ನೀಡಿದೆ.

ಚೀನಾದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಕೊರೊನಾವ್ಯಾಕ್‌’ ಲಸಿಕೆಯ ತುರ್ತುಬಳಕೆಗೆ ಪಾಕಿಸ್ತಾನ ಔಷಧಿ ನಿಯಂತ್ರಣ ಪ್ರಾಧಿಕಾರವು(ಡಿಆರ್‌ಎಪಿ) ಅನುಮತಿ ನೀಡಿದೆ.

‘ಕೊರೊನಾವ್ಯಾಕ್‌ ಸೇರಿದಂತೆ ಚೀನಾದ ಮೂರು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಪಾಕಿಸ್ತಾನದಲ್ಲಿ ಒಟ್ಟು ಐದು ಕೋವಿಡ್‌ ಲಸಿಕೆಗೆ ಅನುಮೋದನೆ ನೀಡಲಾಗಿದೆ’ ಎಂದು ಡಿಆರ್‌ಎಪಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಕೊರೊನಾವ್ಯಾಕ್‌’ ಕಡಿಮೆ ದಕ್ಷತೆಯನ್ನು ಹೊಂದಿದೆ. ಹಾಗಿದ್ದರೂ ಲಸಿಕೆ ಅಭಿಯಾನವನ್ನು ಇನ್ನಷ್ಟು ವೃದ್ಧಿಗೊಳಿಸಲು ಈ ಲಸಿಕೆಯ ತುರ್ತುಬಳಕೆಗೆ ಅನುಮತಿ ನೀಡಲಾಗಿದೆ. ಚೀನಾ, ಟರ್ಕಿ, ಇಂಡೋನೇಷ್ಯಾ, ಬ್ರೆಜಿಲ್‌ ಮತ್ತು ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಕೊರೊನಾವ್ಯಾಕ್‌ ಲಸಿಕೆಯನ್ನು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.