ADVERTISEMENT

ಪಾಕಿಸ್ತಾನ: ಬಲೂಚ್‌ನಲ್ಲಿ 7 ಕಾರ್ಮಿಕರ ಅಪಹರಣ

ಪಿಟಿಐ
Published 23 ಅಕ್ಟೋಬರ್ 2025, 14:09 IST
Last Updated 23 ಅಕ್ಟೋಬರ್ 2025, 14:09 IST
...
...   

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಚೆಕ್‌ಪೋಸ್ಟ್‌ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 7 ಮಂದಿ ಕಾರ್ಮಿಕರನ್ನು ಶಸ್ತ್ರಧಾರಿಗಳು ಅಪಹರಿಸಿರುವ ಘಟನೆ ನಡೆದಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮಸ್ತುಂಗ್‌ ಜಿಲ್ಲೆಯ ಸಿಯಾ ಪೋಶ್‌ ನಗರದಲ್ಲಿ ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಅಪ‍ಹರಣಕ್ಕೀಡಾಗಿರುವ ಕಾರ್ಮಿಕರ ಪೈಕಿ 5 ಮಂದಿ ಸಿಂಧ್ ಪ್ರದೇಶದವರಾಗಿದ್ದು, ಉಳಿದ ಇಬ್ಬರು ಸ್ಥಳೀಯರಾಗಿದ್ದಾರೆ. ಈವರೆಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದೂ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಭದ್ರತಾ ಪಡೆಯ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.