ADVERTISEMENT

ವಿದೇಶಿ ವಿನಿಮಯ ಕೊರತೆ: ಪಾಕ್‌ನಲ್ಲಿ ಇಂಧನ ಕೊರತೆ ಸಾಧ್ಯತೆ

ರಾಯಿಟರ್ಸ್
Published 31 ಜನವರಿ 2023, 12:43 IST
Last Updated 31 ಜನವರಿ 2023, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ/ ನವದೆಹಲಿ: ‘ಪಾಕಿಸ್ತಾನವು ಫೆಬ್ರುವರಿಯಲ್ಲಿ ಇಂಧನ ಕೊರತೆ ಎದುರಿಸುವ ಸಾಧ್ಯತೆ ಇದೆ’ ಎಂದು ಉದ್ಯಮದ ಮೂಲಗಳು ತಿಳಿಸಿವೆ.

‘ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಕ್ಷೀಣಿಸುತ್ತಿರುವ ಕಾರಣದಿಂದಾಗಿ ಬ್ಯಾಂಕ್‌ಗಳು ಆಮದಿಗೆ ಸಾಲ ನೀಡಿಕೆ ಹಾಗೂ ಪಾವತಿ ಸೌಲಭ್ಯವನ್ನು ನಿಲ್ಲಿಸಿವೆ’ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಇಂಧನವೂ ಒಂದು.

ಪಾಕಿಸ್ತಾನವು ಪಾವತಿ ಬಿಕ್ಕಟ್ಟನ್ನು ಎದುರಿಸುತ್ತಿರುವುದರ ಜೊತೆ ಜೊತೆಗೇ ಕುಸಿಯುತ್ತಿರುವ ಪಾಕಿಸ್ತಾನ ರೂಪಾಯಿ ಮೌಲ್ಯವು ಆಮದು ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಇದು ದೇಶದ ಆತಂಕವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.