ADVERTISEMENT

ಯುದ್ಧ: ವಾಣಿಜ್ಯ ವಿಮಾನಗಳಿಗೆ ಪಾಕ್‌ ವಾಯುಮಾರ್ಗ ನಿರ್ಬಂಧ

ಪಿಟಿಐ
Published 2 ಮಾರ್ಚ್ 2026, 16:19 IST
Last Updated 2 ಮಾರ್ಚ್ 2026, 16:19 IST
.............
.............   

ಲಾಹೋರ್‌: ಕರಾಚಿ ಹಾಗೂ ಲಾಹೋರ್‌ನ ವಾಯುಮಾರ್ಗ ಮಾಹಿತಿ ವಲಯದ (ಎಫ್‌ಐಆರ್‌) ಕೆಲವು ಮಾರ್ಗಗಳಲ್ಲಿ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಯನ್ನು ನಿರ್ದಿಷ್ಟ ಅವಧಿಯವರೆಗೆ ನಿರ್ಬಂಧಿಸಲಾಗಿದೆ.

ಪ್ರಾದೇಶಿಕ ಪರಿಸ್ಥಿತಿಯಲ್ಲಿನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನವು ಸೇನಾ ಸಮರಾಭ್ಯಾಸ ನಡೆಸಲು ಮುಂದಾಗಿದೆ. ಸಮರಾಭ್ಯಾಸದಲ್ಲಿ ಪಾಕ್ ವಾಯುಪಡೆಯ ಯುದ್ಧ ವಿಮಾನಗಳು ಭಾಗಿಯಾಗಲಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವಕ್ತಾರ ತಿಳಿಸಿದ್ದಾರೆ.

ಮಾರ್ಚ್‌ 3ರಿಂದ ಮಾರ್ಚ್‌ 13ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಈ ಮಾರ್ಗಗಳಲ್ಲಿ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ಇರುವುದಿಲ್ಲ. ಈ ಅವಧಿಯಲ್ಲಿ ಪಾಕ್‌ ವಾಯುಪಡೆಯ ಯುದ್ಧ ವಿಮಾನಗಳ ಸಮರಾಭ್ಯಾಸ ನಡೆಯಲಿದೆ ಎಂದೂ ವಕ್ತಾರ ತಿಳಿಸಿದ್ದಾರೆ.  

ADVERTISEMENT

ಪಾಕಿಸ್ತಾನ– ಅಫ್ಗಾನಿಸ್ತಾನ ಪಡೆಗಳ ನಡುವೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವಂತೆಯೇ ಪಾಕ್‌ ತೆಗದುಕೊಂಡಿರುವ ಈ ಕ್ರಮ ಮಹತ್ವ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.