ಇಸ್ಲಾಮಾಬಾದ್: ಪಾಕಿಸ್ತಾನದ ಅಣ್ವಸ್ತ್ರ ಶಸ್ತ್ರಾಗಾರದ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನ ಖಂಡಿಸಿದೆ. ರಾಜನಾಥ ಸಿಂಗ್ ಅವರಿಗೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ನಿಬಂಧನೆಗಳ ಬಗ್ಗೆ ಜ್ಞಾನವೇ ಇಲ್ಲ ಎಂದೂ ಟೀಕಿಸಿದೆ.
ಜಮ್ಮು–ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದ್ದ ರಾಜನಾಥ ಸಿಂಗ್, ‘ಪಾಕಿಸ್ತಾನದಂಥ ರಾಕ್ಷಸ ಪ್ರವೃತ್ತಿಯ ರಾಷ್ಟ್ರದ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವಾಗಿರುವುದಿಲ್ಲ. ಹೀಗಾಗಿ ಅಣ್ವಸ್ತ್ರಗಳ ಮೇಲ್ವಿಚಾರಣೆಯನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ವಹಿಸಿಕೊಳ್ಳಬೇಕು‘ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ವಕ್ತಾರ ಶಫ್ಕತ್ ಅಲಿ ಖಾನ್,‘ ಇಂತ ಬೇಜವಾಬ್ದಾರಿಯುತ ಹೇಳಿಕೆಗಳು ರಾಜನಾಥ್ ಸಿಂಗ್ ಅವರ ಹತಾಶೆ ಮತ್ತು ಅಭದ್ರತೆಯನ್ನು ತೋರಿಸುತ್ತವೆ. ಅವರಿಗೆ ಐಎಇಎ ನಿಯಮಗಳ ಬಗ್ಗೆ ಅರಿವು ಇಲ್ಲ. ಭಾರತವನ್ನು ಮಣಿಸಲು ಅಣ್ವಸ್ತ್ರಗಳನ್ನೇ ಬಳಸಬೇಕೆಂದಿಲ್ಲ, ಇದರ ಹೊರತಾಗಿಯೂ ಭಾರತವನ್ನು ಮಣಿಸುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.