ADVERTISEMENT

Pakistan Floods | ಭಾರಿ ಮಳೆ: ಸಾವಿನ ಸಂಖ್ಯೆ 657ಕ್ಕೆ ಏರಿಕೆ

ಪಿಟಿಐ
Published 18 ಆಗಸ್ಟ್ 2025, 16:06 IST
Last Updated 18 ಆಗಸ್ಟ್ 2025, 16:06 IST
<div class="paragraphs"><p>ಪಾಕಿಸ್ತಾನದಲ್ಲಿ ಭಾರಿ ಮಳೆ‌ ( ಸಂಗ್ರಹ ಚಿತ್ರ)</p></div>

ಪಾಕಿಸ್ತಾನದಲ್ಲಿ ಭಾರಿ ಮಳೆ‌ ( ಸಂಗ್ರಹ ಚಿತ್ರ)

   

ಪೇಶಾವರ್: ಪಾಕಿಸ್ತಾನದಲ್ಲಿ ಜೂನ್‌ನಿಂದ ಇದುವರೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವಿಗೀಡಾದವರ ಸಂಖ್ಯೆ ಕನಿಷ್ಠ 657ಕ್ಕೆ ಏರಿಕೆಯಾಗಿದೆ. ಕನಿಷ್ಠ 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆಗಸ್ಟ್‌ 22ರವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ. ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚು ಹಾನಿ ಉಂಟುಮಾಡಿದ ಮಳೆಗಾಲ. ಸೆಪ್ಟೆಂಬರ್‌ನಲ್ಲೂ ಮಳೆ ‍ಸುರಿಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ 60ರಿಂದ 70ರಷ್ಟು ಹೆಚ್ಚು ಮಳೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ತಯ್ಯಬ್ ಶಾಹ ತಿಳಿಸಿದ್ದಾರೆ.

ADVERTISEMENT

ಜೂನ್‌ 26ರ ನಂತರ ಮಳೆ ಹಾನಿಯಿಂದ 171 ಮಕ್ಕಳು, 94 ಮಕ್ಕಳು ಸೇರಿದಂತೆ 657 ಮಂದಿ ಸಾವಿಗೀಡಾಗಿದ್ದಾರೆ. ಖೈಬರ್‌ ಪಖ್ತುಂಕ್ವಾ ಪ್ರಾಂತ್ಯ ಅತೀ ಹೆಚ್ಚು ಹಾನಿ ಎದುರಿಸಿದ್ದು, 390 ಮಂದಿ ಸಾವಿಗೀಡಾಗಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ 164 ಮಂದಿ ಸಾವಿಗೀಡಾಗಿದ್ದಾರೆ.

ಖೈಬರ್‌ ಪಖ್ತುಂಕ್ವಾದ ಬುನೇರ್ ಮತ್ತು ಶಾಂಗ್ಲಾ ಜಿಲ್ಲೆಗಳಲ್ಲಿ 150 ಮಂದಿ ನಾಪತ್ತೆಯಾಗಿದ್ದು, ಅಧಿಕಾರಿಗಳ ಪ್ರಕಾರ ಬುನೇರ್‌ನಲ್ಲಿ ಮದುವೆ ತಯಾರಿಯಲ್ಲಿದ್ದ ಒಂದೇ ಕುಟುಂಬದ 21 ಮಂದಿ ಸೇರಿ 81 ಮಂದಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.