ADVERTISEMENT

ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಜಲ್ ಟ್ವಿಟರ್ ಖಾತೆ ರದ್ದು 

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 5:02 IST
Last Updated 20 ಫೆಬ್ರುವರಿ 2019, 5:02 IST
   

ಇಸ್ಲಾಮಬಾದ್: ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಜಲ್ ಅವರ ಟ್ವಿಟರ್ ಖಾತೆ ರದ್ದಾಗಿದೆ. ಈ ಖಾತೆ ಬಗ್ಗೆ ಭಾರತೀಯ ಅಧಿಕಾರಿಗಳು ದೂರುನೀಡಿದ್ದರಿಂದ ಖಾತೆ ರದ್ದಾಗಿದೆ ಎಂದು ಪಾಕ್ ಮಾಧ್ಯಮಗಳು ಆರೋಪಿಸಿವೆ.

ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಟ್ವೀಟಿಸಿದ್ದ ಫೈಜಲ್, ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣ ಬಗ್ಗೆ ಐಸಿಜೆಯಲ್ಲಿ ನಡೆಯುತ್ತಿರುವ ವಿಚಾರಣೆ ವಿಷಯಗಳನ್ನುುನಿರಂತರ ಟ್ವೀಟಿಸುತ್ತಿದ್ದರು. ಈ ಟ್ವೀಟ್ ನಂತರ ಇವರ ಟ್ವಿಟರ್ ಖಾತೆ ರದ್ದಾಗಿದೆ.

ಫೈಜಲ್ ಅವರ ವೈಯಕ್ತಿಕ ಟ್ವಿಟರ್ ಖಾತೆ ಮಾತ್ರ ರದ್ದು ಆಗಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ಖಾತೆ (@ForeignOfficePk) ಸಕ್ರಿಯವಾಗಿದೆ.

ADVERTISEMENT

ಏತನ್ಮಧ್ಯೆ, ಟ್ವಿಟರ್ ಖಾತೆ ರದ್ದಾಗಿರುವ ಬಗ್ಗೆ ಫೈಜಲ್ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.