ADVERTISEMENT

ಭಯೋತ್ಪಾದಕರ ಜಾಲಗಳ ವಿರುದ್ಧ ಪಾಕಿಸ್ತಾನ ಕ್ರಮ: ಅಮೆರಿಕ ಶ್ಲಾಘನೆ

ಪಿಟಿಐ
Published 16 ಡಿಸೆಂಬರ್ 2024, 14:37 IST
Last Updated 16 ಡಿಸೆಂಬರ್ 2024, 14:37 IST
<div class="paragraphs"><p>ಪಾಕಿಸ್ತಾನ</p></div>

ಪಾಕಿಸ್ತಾನ

   

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಹಾಗೂ ಪ್ರಾದೇಶಿಕ ಭಯೋತ್ಪಾದಕರ ಜಾಲಗಳ ವಿರುದ್ಧ ಪಾಕಿಸ್ತಾನವು ಗಣನೀಯವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವರದಿಯೊಂದು ಹೇಳಿದೆ.

‘2023ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, ಗಂಭೀರ ಭದ್ರತಾ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಪಾಕಿಸ್ತಾನದಲ್ಲಿ ಈಗ 41 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ’ ಎಂದೂ ಅದು ಹೇಳಿದೆ.

ADVERTISEMENT

ಈ ಕುರಿತು ವರದಿ ಮಾಡಿರುವ ‘ಡಾನ್‌’ ಪತ್ರಿಕೆಯು ‘ಈ ವಾರದಲ್ಲಿ ಅಮೆರಿಕದ ವರದಿಯು ಬಿಡುಗಡೆಯಾಗಿದೆ. 2023ರಲ್ಲಿ ಹಣ ಅಕ್ರಮ ವರ್ಗಾವಣೆ ಹಾಗೂ ಹಾಗೂ ಭಯೋತ್ಪಾದಕರಿಗೆ ನಿಧಿ ಸಂಗ್ರಹ ವಿಚಾರದಲ್ಲಿ ವಿಶ್ವಸಂಸ್ಥೆಯ ನಿಯಮಗಳ ಅನುಸಾರವಾಗಿ ಪಾಕಿಸ್ತಾನ ಕೈಗೊಂಡ ಕ್ರಮಗಳನ್ನು ವರದಿಯಲ್ಲಿ ಶ್ಲಾಘಿಸಲಾಗಿದೆ’ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.