ADVERTISEMENT

ಪಾಕಿಸ್ತಾನದಲ್ಲಿ ವೈದ್ಯೆಗೆ ಗುಂಡಿಕ್ಕಿ ‘ಮರ್ಯಾದೆಗೇಡು’ ಹತ್ಯೆ

ಪಿಟಿಐ
Published 14 ಆಗಸ್ಟ್ 2025, 14:01 IST
Last Updated 14 ಆಗಸ್ಟ್ 2025, 14:01 IST
_
_   

ಲಾಹೋರ್: 24 ವರ್ಷದ ವೈದ್ಯೆಯನ್ನು ಅವರ ಕಿರಿಯ ಸಹೋದರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಪ್ರಕರಣವು ಮರ್ಯಾದೆಗೇಡು ಹತ್ಯೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಡಾ. ಅಯೇಷಾ ಬೀಬಿ ಹತ್ಯೆಗೀಡಾದ ವೈದ್ಯೆ. ಘಟನೆಯು ಕಳೆದ ವಾರ ಟೋಬಾ ಟೇಕ್ ಸಿಂಗ್‌ನಲ್ಲಿ ನಡೆದಿದೆ. ಸಂತ್ರಸ್ತೆ ಕಿರ್ಗಿಸ್ತಾನ್‌ನಿಂದ ಎಂಬಿಬಿಎಸ್‌ ಮುಗಿಸಿ ಇತ್ತೀಚೆಗಷ್ಟೆ ದೇಶಕ್ಕೆ ಮರಳಿದ್ದರು.

ಆರಂಭದಲ್ಲಿ ಹೇಳಿಕೆ ನೀಡಿದ್ದ ಅಯೇಷಾ ಅವರ ತಂದೆ, ‘ಊಟ ಸಿದ್ಧ ಮಾಡಿಲ್ಲ ಎಂಬ ವಿಚಾರವಾಗಿ ವಾಗ್ವಾದ ನಡೆದು ಕಿ‌ರಿಯ ಸಹೋದರ ಉಮೈರ್ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ’ ಎಂದು ತಿಳಿಸಿದ್ದರು.

ADVERTISEMENT

ಆದಾಗ್ಯೂ, ಬುಧವಾರ ಉಮೈರ್‌ನನ್ನು ಪೊಲೀಸರು ಬಂಧಿಸಿದರು. ‘ಅಯೇಷಾ ಅವರು ಕಿರ್ಗಿಸ್ತಾನದಲ್ಲಿ ಎಂಬಿಬಿಎಸ್‌ ಮಾಡಿರುವ ತಮ್ಮ ಆಯ್ಕೆಯ ಹುಡುಗನನ್ನು ವರಿಸಲು ಬಯಸಿದ್ದಕ್ಕೆ ಹತ್ಯೆ ಮಾಡಿದ್ದಾಗಿ ಉಮೈರ್‌ ವಿಚಾರಣೆ ವೇಳೆ ಒಪ‍್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ‌ಪ್ರತಿ ವರ್ಷ 1,000 ಮಹಿಳೆಯರ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತವೆ ಎಂದು ಪಾಕಿಸ್ತಾನಿ ಮಾನವ ಹಕ್ಕುಗಳ ಆಯೋಗದ ಅಂಕಿಅಂಶ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.