ADVERTISEMENT

ಉಡುಗೊರೆಯ ನೆಕ್ಲೇಸ್‌ ಮಾರಾಟ: ಇಮ್ರಾನ್ ಖಾನ್ ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 21:17 IST
Last Updated 14 ಏಪ್ರಿಲ್ 2022, 21:17 IST
   

ಇಸ್ಲಾಮಾಬಾದ್‌:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಅಧಿಕಾರಾವಧಿ ಯಲ್ಲಿ ಉಡುಗೊರೆಯಾಗಿ ಪಡೆದಿದ್ದ ದುಬಾರಿ ನೆಕ್ಲೇಸ್ ಅನ್ನು ದೇಶದ ‘ಉಡು ಗೊರೆ ಭಂಡಾರ’ಕ್ಕೆ ನೀಡದೆ, ಆಭರಣ ವ್ಯಾಪಾರಿಗೆ ₹ 18 ಕೋಟಿಗೆಮಾರಾಟ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂ ಧಿಸಿದಂತೆ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ವಿಚಾರಣೆಯನ್ನು ಆರಂಭಿಸಿದೆ ಎಂದು ಬುಧವಾರ ಮಾಧ್ಯಮವೊಂದು ವರದಿ ಮಾಡಿದೆ.

ನೆಕ್ಲೇಸ್‌ ಅನ್ನು ಇಮ್ರಾನ್‌ ಅವರು ತಮ್ಮ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು. ಅವರು ಅದನ್ನು ಲಾಹೋ ರ್‌ನ ಆಭರಣ ವ್ಯಾಪಾರಿಗೆ ₹ 18 ಕೋಟಿಗೆ ಮಾರಾಟ ಮಾಡಿದ್ದರು. ಈ ಕುರಿತುಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ಆರಂಭಿಸಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT