ADVERTISEMENT

‘ಬೂದು ಪಟ್ಟಿ’ಯಲ್ಲೇ ಪಾಕ್‌ ಮುಂದುವರಿಕೆ ಸಂಭವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:43 IST
Last Updated 8 ನವೆಂಬರ್ 2019, 19:43 IST

ಇಸ್ಲಾಮಾಬಾದ್‌: ಭಯೋತ್ಪಾದಕರಿಗೆ ಆರ್ಥಿಕ ನೆರವು ಹಾಗೂ ಹಣ ಅಕ್ರಮ ವರ್ಗಾವಣೆ ಕಾರಣದಿಂದಾಗಿ ಹಣಕಾಸು ಕ್ರಿಯಾಪಡೆ (ಎಫ್‌ಎಟಿಎಫ್‌) ಪಾಕಿಸ್ತಾನವನ್ನು ‘ಬೂದು ಪಟ್ಟಿ’ಯಲ್ಲಿಯೇ ಮುಂದುವರಿಸುವ ಸಾಧ್ಯತೆ ಇದೆ.

ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಫ್‌ಎಟಿಎಫ್‌, ಪಾಕಿಸ್ತಾನವನ್ನು ಕಳೆದ ವರ್ಷ ಜೂನ್‌ನಲ್ಲಿ ಬೂದು ಪಟ್ಟಿಗೆ ಸೇರಿಸಿದೆ. ಭಯೋತ್ಪಾದಕರಿಗೆ ನೀಡುತ್ತಿರುವ ಆರ್ಥಿಕ ನೆರವು ತಡೆಗಟ್ಟಲು ಕಳೆದ ಅಕ್ಟೋಬರ್‌ 31ರವರೆಗೆ ಗಡುವು ನೀಡಿದ್ದ ಎಫ್‌ಎಟಿಎಫ್‌, ಈ ವಿಷಯದಲ್ಲಿ ವಿಫಲವಾದರೆ ಇರಾನ್‌ ಹಾಗೂ ಉತ್ತರ ಕೊರಿಯಾ ಜತೆ ಪಾಕಿಸ್ತಾನವನ್ನೂ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT