ADVERTISEMENT

ವಿಶ್ವಕಪ್ ಗೆದ್ದಷ್ಟು ಖುಷಿಯಾಗಿದೆ: ಇಮ್ರಾನ್‌ ಖಾನ್‌

ಪಿಟಿಐ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST
   

ಇಸ್ಲಾಮಾಬಾದ್‌: ‘ಅಮೆರಿಕ ಪ್ರವಾಸ ಮುಗಿಸಿ ತವರಿಗೆ ಮರಳಿದಾಗ ನನ್ನ ಬೆಂಬಲಿಗರು ಅದ್ದೂರಿ ಸ್ವಾಗತ ನೀಡಿದರು.

ಬೆಂಬಲಿಗರ ಈ ಅಭಿಮಾನ ಕಂಡ ನನಗೆ ಕ್ರಿಕೆಟ್‌ನ ವಿಶ್ವಕಪ್‌ ಗೆದ್ದು ಬಂದಷ್ಟೇ ಖುಷಿಯಾಯಿತು’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಪ್ರಧಾನಿಯಾದ ನಂತರ ಅವರು ಇದೇ ಮೊದಲ ಬಾರಿಗೆ ಈಚೆಗೆ ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಗುರುವಾರ ಇಲ್ಲಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಬೆಂಬಲಿಗರು, ಅವರ ಪರ ಘೋಷಣೆ ಕೂಗಿ ಸ್ವಾಗತಿಸಿದರು. ನಂತರ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

1992ರಲ್ಲಿ ಇಮ್ರಾನ್‌ ಖಾನ್‌ ನಾಯಕತ್ವದ ಪಾಕಿಸ್ತಾನದ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಿತ್ತು.

ಸ್ಪಷ್ಟವಾದ ಒಪ್ಪಿಗೆ: ಭಾರತ

ನವದೆಹಲಿ: ‘ದೇಶದಲ್ಲಿ ಈಗಲೂ 30–40 ಸಾವಿರ ಉಗ್ರರಿದ್ದಾರೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ಭಾರತ ಗುರುವಾರ ಪ್ರತಿಕ್ರಿಯಿಸಿದೆ.

‘ಪಾಕಿಸ್ತಾನವು ಉಗ್ರರ ವಿರುದ್ಧ ನಂಬಲರ್ಹ ಹಾಗೂ ಶಾಶ್ವತವಾದ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಇಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.