ADVERTISEMENT

ಸಾರ್ಕ್‌ ಶೃಂಗಸಭೆ ನಡೆಸಲು ಪಾಕಿಸ್ತಾನ ಸಿದ್ಧ: ಖುರೇಷಿ  

‘ಭಾರತ ವರ್ಚುವಲ್‌ ರೀತಿ ಪಾಲ್ಗೊಳ್ಳಬಹುದು’

ಪಿಟಿಐ
Published 3 ಜನವರಿ 2022, 13:23 IST
Last Updated 3 ಜನವರಿ 2022, 13:23 IST
ಶಾ ಮೊಹಮೂದ್‌ ಖುರೇಷಿ
ಶಾ ಮೊಹಮೂದ್‌ ಖುರೇಷಿ   

ಇಸ್ಲಾಮಾಬಾದ್‌: 19ನೇ ಸಾರ್ಕ್‌ ಶೃಂಗಸಭೆಯನ್ನು ಆಯೋಜಿಸಲು ತಮ್ಮ ದೇಶವು ಸಿದ್ಧವಿದೆ. ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಇಸ್ಲಾಮಾಬಾದ್‌ಗೆ ಬರುವ ಇಚ್ಛೆಯಿಲ್ಲದಿದ್ದರೆ ನವದೆಹಲಿಯಿಂದಲೇ ವರ್ಚುವಲ್‌ ಮಾದರಿಯಲ್ಲಿ ಪಾಲ್ಗೊಳ್ಳಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಸೋಮವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು 2021ರಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದರು. ಶೃಂಗಸಭೆಯಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಬರಲು ನಿರಾಕರಿಸಿ ಭಾರತವು ತನ್ನ ಮೊಂಡುತನದ ಪ್ರದರ್ಶನ ಮಾಡುವ ಮೂಲಕ ಸಾರ್ಕ್‌ ಅನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT