ADVERTISEMENT

ಪಾಕಿಸ್ತಾನ: ಪರಮಾಣು ಘಟಕಕ್ಕೆ ಇಂಧನ ತುಂಬುವ ಪ್ರಕ್ರಿಯೆ ಆರಂಭ

ಚೀನಾದ ತಾಂತ್ರಿಕ ಸಹಯೋಗದಲ್ಲಿ ನಿರ್ಮಾಣವಾಗಿರುವ ಘಟಕ

ಪಿಟಿಐ
Published 2 ಡಿಸೆಂಬರ್ 2020, 9:49 IST
Last Updated 2 ಡಿಸೆಂಬರ್ 2020, 9:49 IST
ಪಾಕಿಸ್ತಾನ ಭೂಪಟ
ಪಾಕಿಸ್ತಾನ ಭೂಪಟ   

ಇಸ್ಲಾಮಾಬಾದ್: ಮುಂದಿನ ವರ್ಷ ಕಾರ್ಯಾರಂಭ ಮಾಡಲಿರುವ ಚೀನಾ ಸಹಯೋಗದ 1,100 ಮೆಗಾವ್ಯಾಟ್ ಅಣು ವಿದ್ಯುತ್‌ ಘಟಕದ ಪರೀಕ್ಷಾರ್ಥ ಪ್ರಯೋಗಕ್ಕೆ ಮುಂದಾಗಿರುವ ಪಾಕಿಸ್ತಾನ, ಘಟಕಕ್ಕೆ ಇಂಧನ ತುಂಬುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ‘ಡಾನ್‌ ನ್ಯೂಸ್‌‘ ವರದಿ ಮಾಡಿದೆ.

ಪಾಕಿಸ್ತಾನ ಪರಮಾಣು ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆದ ಪಾಕ್ ಸರ್ಕಾರ, ಕರಾಚಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಪರಮಾಣು ವಿದ್ಯುತ್ ಘಟಕ–2(ಕೆ–2)ಕ್ಕೆ ಮಂಗಳವಾರದಿಂದ ಇಂಧನ ತುಂಬುವ ಕಾರ್ಯ ಆರಂಭಿಸಿದೆ.

ಕಾರ್ಯತಂತ್ರ ಯೋಜನಾ ವಿಭಾಗದ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್‌ ನದೀಮ್ ಝಾಕಿ ಮಂಜ್‌, ಪಾಕಿಸ್ತಾನ ಪರಮಾಣ ಇಂಧನ ಆಯೋಗದ ಅಧ್ಯಕ್ಷ ಮೊಹಮ್ಮದ್‌ ನಯೀಮ್ ಮತ್ತು ಚೀನಾ ಮತ್ತು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಪರಮಾಣು ಘಟಕಕ್ಕೆ ಇಂಧನ ತುಂಬುವ ಪ್ರಕ್ರಿಯೆಗೆ ಸಾಕ್ಷಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಕೆ -2 ಎಂಬುದು ಚೀನಾದ ಎಚ್‌ಪಿಆರ್ -1000 ತಂತ್ರಜ್ಞಾನವನ್ನು ಆಧರಿಸಿದ ಒತ್ತಡಕ್ಕೊಳಗಾದ ನೀರಿನ ರಿಯಾಕ್ಟರ್ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಮೂರನೇ ತಲೆಮಾರಿನ ಘಟಕವಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ -2 ಸ್ಥಾವರದ ನಿರ್ಮಾಣ ಕಾರ್ಯ ಆಗಸ್ಟ್ 31, 2015 ರಂದು ಪ್ರಾರಂಭವಾಯಿತು. ಹಲವಾರು ವಾಣಿಜ್ಯ ಮತ್ತು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಏಪ್ರಿಲ್ 2021ರಿಂದ ಈ ಘಟಕ ಕಾರ್ಯಾರಂಭ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.