ADVERTISEMENT

ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ: ವ್ಯಕ್ತಿಗೆ ಜೈಲು

ಸೈಬರ್‌ಕ್ರೈಂ ಕಾನೂನಿನಡಿ ಮೊದಲ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:29 IST
Last Updated 18 ಅಕ್ಟೋಬರ್ 2019, 19:29 IST

ಲಾಹೋರ್: ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ಪೋಸ್ಟ್ ಪ್ರಕಟಿಸಿದ ಸಾಜಿದ್ ಅಲಿ ಎಂಬಾತನಿಗೆ ಪಾಕಿಸ್ತಾನ ನ್ಯಾಯಾಲಯವು ಐದು ವರ್ಷಕಠಿಣ ಜೈಲು ಶಿಕ್ಷೆ ವಿಧಿಸಿಶುಕ್ರವಾರ ತೀರ್ಪು ನೀಡಿದೆ.

ಪಾಕಿಸ್ತಾನದಲ್ಲಿ ಸೈಬರ್ ಕ್ರೈಂ ಕಾನೂನು ಜಾರಿಗೆ ಬಂದಮೇಲೆ ವಿಚಾರಣೆಗೊಳಪಟ್ಟ ಮೊದಲ ಪ್ರಕರಣ ಇದಾಗಿದೆ.ಧರ್ಮನಿಂದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ 2016ರಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಮ್ ಅಡಿ ಕಾನೂನು ರೂಪಿಸಲಾಗಿದೆ.2017ರಲ್ಲಿ ಸಾಜಿದ್ ಅಲಿ, ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT