ಪೆಶಾವರ: ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಮಾಂಡರ್ ಉಗ್ರ ಮುಹಮದ್ ನೂರ್ ಅಲಿಯಾಸ್ ಸರಕೈ ಎಂಬಾತನನ್ನು ಪಾಕಿಸ್ತಾನದ ಭದ್ರತಾ ಪಡೆಗಳು ವಾಜಿರಿಸ್ತಾನದಲ್ಲಿ ಹತ್ಯೆ ಮಾಡಿವೆ ಎಂದು ಅಲ್ಲಿನ ಸೇನೆ ತಿಳಿಸಿದೆ.
ಡಿಸೆಂಬರ್ 2ರಂದು ವಾಜಿರಿಸ್ತಾನದ ಶೇವಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮುಹಮದ್ ಹತನಾಗಿದ್ದಾನೆ. ನಂತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗವಾದ ಅಂತರ್ ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆ ಶನಿವಾರ ಹೇಳಿದೆ.
‘ಭದ್ರತಾ ಪಡೆಗಳ ವಿರುದ್ಧ ನಡೆಸಿದ್ದ ಹಲವಾರು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ದಳಕ್ಕೆ ಮುಹಮದ್ ಬೇಕಾಗಿದ್ದ’ ಎಂದೂ ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.