ADVERTISEMENT

ಪಾಕಿಸ್ತಾನದ ಪೆಶಾವರದಲ್ಲಿ ರಾಜಕಪೂರ್‌ ಜನ್ಮಶತಮಾನೋತ್ಸವ ಆಚರಣೆ

ಪಿಟಿಐ
Published 15 ಡಿಸೆಂಬರ್ 2024, 14:26 IST
Last Updated 15 ಡಿಸೆಂಬರ್ 2024, 14:26 IST
ರಾಜ್‌ ಕಪೂರ್‌ 
ರಾಜ್‌ ಕಪೂರ್‌    

ಪೆಶಾವರ: ಬಾಲಿವುಡ್‌ನ ಪ್ರಸಿದ್ಧ ನಟ, ನಿರ್ದೇಶಕ, ದಿವಂಗತ ರಾಜಕಪೂರ್‌ ಅವರ ಜನ್ಮಸ್ಥಳವಾದ ಪಾಕಿಸ್ತಾನದ ಪೆಶಾವರದಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು. 

ರಾಜಕಪೂರ್‌ ಅವರ 100ನೇ ಜನ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಲು ಹಾಗೂ ಅವರ ಕೊಡುಗೆಯ ಸ್ಮರಣಾರ್ಥವಾಗಿ ಖೈಬರ್‌ ಪಖ್ತೂಂಕ್ವಾ ಪ್ರಾಂತ್ಯದ ಸಾಂಸ್ಕೃತಿಕ ಪರಂಪರೆ ಮಂಡಳಿ (ಸಿಎಚ್‌ಸಿ) ಹಾಗೂ ಪುರಾತತ್ವ ನಿರ್ದೇಶನಾಲಯಗಳು ಜಂಟಿಯಾಗಿ ಶನಿವಾರ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಪೆಶಾವರದಲ್ಲಿರುವ ಕಪೂರ್‌ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸಿನಿ ಪ್ರಿಯರು ಹಾಗೂ ಅಭಿಮಾನಿಗಳು ಭಾಗಿಯಾಗಿದ್ದರು. 

ADVERTISEMENT

ಪಾಕಿಸ್ತಾನದ ಖಿಸ್ಸಾ ಖವಾನಿ ಬಜಾರ್‌ನಲ್ಲಿರುವ ರಾಜ್‌ ಕಪೂರ್‌ ಹಾಗೂ ಮತ್ತೊಬ್ಬ ಖ್ಯಾತ ನಟ ದಿಲೀಪ್‌ ಕುಮಾರ್‌ ಅವರ ಪೂರ್ವಜರ ಮನೆಗಳ ನವೀಕರಣಕ್ಕಾಗಿ ವಿಶ್ವ ಬ್ಯಾಂಕ್‌ ತಲಾ ₹10 ಕೋಟಿ ನೀಡುವುದಾಗಿ ಘೋಷಿಸಿರುವ ನಿರ್ಧಾರವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು.   

ಪೆಶಾವರದ ಢಾಕಿ ನಲ್ಬಂಡಿಯಲ್ಲಿ 1924ರ ಡಿಸೆಂಬರ್‌ 14ರಂದು ರಾಜ್‌ ಕಪೂರ್‌ ಜನಿಸಿದರು.  ಇವರ ತಂದೆ ಪೃಥ್ವಿರಾಜ್‌ ಕಪೂರ್‌ ಅವರೂ ಖ್ಯಾತ ನಟರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.