ADVERTISEMENT

ಅರಾಜಕತೆ ಸೃಷ್ಟಿ ಯತ್ನ ಬೇಡ: ಪಾಕ್‌ ಸೇನಾ ಮುಖ್ಯಸ್ಥ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 15:44 IST
Last Updated 8 ಆಗಸ್ಟ್ 2024, 15:44 IST
ಜನರಲ್‌ ಅಸಿಮ್‌ ಮುನಿರ್
ಜನರಲ್‌ ಅಸಿಮ್‌ ಮುನಿರ್   

ಇಸ್ಲಾಮಾಬಾದ್‌: ಬಾಂಗ್ಲಾದೇಶದಲ್ಲಿ ಕಂಡುಬಂದ ರೀತಿಯ ಅರಾಜಕತೆಯನ್ನು ದೇಶದಲ್ಲಿ ಸೃಷ್ಟಿಸುವ ಪ್ರಯತ್ನಗಳಿಗೆ ಕೈಹಾಕದಂತೆ ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್‌ ಗುರುವಾರ ಎಚ್ಚರಿಸಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ನಡೆಸುವ ಯತ್ನಗಳನ್ನು ಸಶಸ್ತ್ರಗಳ ಪಡೆಗಳು ವಿಫಲಗೊಳಿಸಿ, ದೇಶದ ಸಮಗ್ರತೆಯನ್ನು ಕಾಪಾಡಲಿವೆ ಎಂದೂ ಅವರು ಹೇಳಿದ್ದಾರೆ.

ಬಾಂಗ್ಲಾದೇಶದೊಂದಿಗೆ ಪಾಕಿಸ್ತಾನದ ಸ್ಥಿತಿ ಹೋಲಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪೋಸ್ಟ್‌ಗಳು ಹಂಚಿಕೆಯಾಗಿದ್ದರಿಂದ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.