ADVERTISEMENT

ಪಾಕಿಸ್ತಾನ: ರಾಜ್‌ಕಪೂರ್‌, ದಿಲೀಪ್‌ಕುಮಾರ್‌ ಪೂರ್ವಜರ ಮನೆ ಖರೀದಿಗೆ ಹಣ ಬಿಡುಗಡೆ

ಪಿಟಿಐ
Published 22 ಮೇ 2021, 9:46 IST
Last Updated 22 ಮೇ 2021, 9:46 IST
ಕಪೂರ್‌ ಹವೇಲಿ
ಕಪೂರ್‌ ಹವೇಲಿ   

ಪೇಶಾವರ: ಭಾರತೀಯ ಸಿನಿಮಾ ರಂಗದ ಖ್ಯಾತ ನಟರಾದ ರಾಜ್‌ಕಪೂರ್‌ ಮತ್ತು ದಿಲೀಪ್‌ ಕುಮಾರ್‌ ಅವರ ಪೂರ್ವಜರ ಇಲ್ಲಿನ ಮನೆಯನ್ನು ಖರೀದಿಸಲು ಪಾಕಿಸ್ತಾನದ ಖೈಬರ್‌ ಪಕ್ತುನ್‌ಖ್ವಾ ಸರ್ಕಾರವು ₹2.30 ಕೋಟಿ ಹಣವನ್ನು ಪೇಶಾವರ ಡೆಪ್ಯೂಟಿ ಕಮಿಷನರ್‌ ಅವರಿಗೆ ನೀಡಿದೆ.

ಸರ್ಕಾರವು ಎರಡೂ ಮನೆಯ ಮಾಲೀಕರಿಗೆ ಕಟ್ಟಡ ಸ್ವಾಧೀನ ಕುರಿತಾಗಿ ಅಂತಿಮ ನೋಟಿಸ್‌ ಕಳುಹಿಸಿದೆ. ಇದರ ಬೆನ್ನಲ್ಲೇ ಮನೆಗಳ ಖರೀದಿಗಾಗಿ ಪಾಕಿಸ್ತಾನದ ಪುರಾತತ್ವ ಇಲಾಖೆಯು ಹಣವನ್ನು ಹಸ್ತಾಂತರಿಸಿದೆ.

‘ಈ ಎರಡೂ ಕಟ್ಟಡಗಳನ್ನು ಸರ್ಕಾರವು ಆದಷ್ಟು ಬೇಗ ವಶಕ್ಕೆ ಪಡೆಯಲಿದೆ. ಬಳಿಕ ಮನೆಯ ಮೂಲ ವಿನ್ಯಾಸ ಮತ್ತು ಆಕಾರಗಳನ್ನು ‍ಮರು ನಿರ್ಮಿಸುವ ಕಾರ್ಯವನ್ನು ಆರಂಭಿಸಲಿದ್ದೇವೆ’ ಎಂದು ಪುರಾತತ್ವ ಇಲಾಖೆಯ ನಿರ್ದೇಶಕ ಕೆಪಿಕೆ ಅಬ್ದುಸ್‌ ಸಮಾದ್‌ ಅವರು ಮಾಹಿತಿ ನೀಡಿದರು.

ADVERTISEMENT

ಖೈಬರ್‌ ಪಕ್ತುನ್‌ಖ್ವಾ ಸರ್ಕಾರವು ಈ ಎರಡೂ ಕಟ್ಟಡಗಳನ್ನು ಚಿತ್ರನಟರಿಬ್ಬರ ನೆನಪಿನಲ್ಲಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಿದೆ. ರಾಜ್‌ಕಪೂರ್‌ ಮತ್ತು ದಿಲೀಪ್‌ ಕುಮಾರ್‌ ಅವರ ಮನೆಯನ್ನು 2.30ಕೋಟಿಗೆ ಖರೀದಿಲು ಸರ್ಕಾರವು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.