ADVERTISEMENT

ಪಾಕಿಸ್ತಾನ| ಭದ್ರತೆ ಕುರಿತು ಸಂಸದೀಯ ಸಮಿತಿಗೆ ಮಾಹಿತಿ ನೀಡಲಿದೆ ಪಾಕ್‌ ಸೇನೆ

ಪಿಟಿಐ
Published 30 ಆಗಸ್ಟ್ 2021, 7:02 IST
Last Updated 30 ಆಗಸ್ಟ್ 2021, 7:02 IST
ಖಮಾರ್‌ ಜಾವೇದ್‌ ಬಜ್ವಾ
ಖಮಾರ್‌ ಜಾವೇದ್‌ ಬಜ್ವಾ   

ಇಸ್ಲಾಮಾಬಾದ್‌: ‘ ಕಾಶ್ಮೀರ ಸೇರಿದಂತೆ ಆಂತರಿಕ ಮತ್ತು ಬಾಹ್ಯ ಭದ್ರತೆಯ ಕುರಿತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೂರು ಸಂಸದೀಯ ಸಮಿತಿಗೆ ಮಾಹಿತಿ ನೀಡಲಿದ್ದಾರೆ’ ಎಂದು ಮಾಧ್ಯಮ ವರದಿಗಳು ಹೇಳಿವೆ.

‘ಆಗಸ್ಟ್‌ 15ರಂದು ಅಫ್ಗಾನಿಸ್ತಾನವನ್ನು ತಾಲಿಬಾನ್‌ ಸ್ವಾಧೀನಪಡಿಸಿಕೊಂಡ ಬಳಿಕ ಮತ್ತು ಕಾಬೂಲ್‌ನಲ್ಲಿ ಐಎಸ್‌–ಕೆಯ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನ ಸರ್ಕಾರವು ಮೊದಲ ಬಾರಿ ಸಂಸತ್‌ ಸದಸ್ಯರೊಂದಿಗೆ ಭದ್ರತೆಗೆ ಸಂಬಂಧಿಸಿದ ಸಭೆ ನಡೆಸಲಿದೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಕಾಶ್ಮೀರದ ಸಂಸದೀಯ ಸಮಿತಿ, ರಕ್ಷಣೆ ಕುರಿತ ಸೆನೆಟ್ ಸ್ಥಾಯಿ ಸಮಿತಿ ಮತ್ತು ರಕ್ಷಣೆ ಕುರಿತ ನ್ಯಾಷನಲ್‌ ಅಸೆಂಬ್ಲಿ ಸ್ಥಾಯಿ ಸಮಿತಿ ಸದಸ್ಯರು ಭಾಗಿಯಾಗಲಿದ್ದಾರೆ.

ADVERTISEMENT

ಈ ವೇಳೆ ಪಾಕಿಸ್ತಾನ ಸೇನೆ ಮುಖ್ಯಸ್ಥ ಜಾವೇದ್‌ ಬಾಜ್ವಾ ಅವರೊಂದಿಗೆ ಸಂಸತ್‌ ಸದಸ್ಯರು ಎರಡು ಗಂಟೆಗಳ ಕಾಲ ಸಂವಾದ ನಡೆಸಲಿದ್ದಾರೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ(ಪಿಪಿಪಿ) ಸಂಸದ ರಾಜಾ ರಬಾನಿ ಅವರು ಈ ಸಭೆಯನ್ನು ಸಂಸತ್‌ ಭವನದಲ್ಲಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.