ADVERTISEMENT

Palestinians Protest: ಹಮಾಸ್‌ ವಿರುದ್ಧ ಮುಂದುವರಿದ ಪ್ರತಿಭಟನೆ

ಏಜೆನ್ಸೀಸ್
Published 27 ಮಾರ್ಚ್ 2025, 15:51 IST
Last Updated 27 ಮಾರ್ಚ್ 2025, 15:51 IST
<div class="paragraphs"><p>ಇಸ್ರೇಲ್‌ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಒತ್ತಾಯಿಸಿ ಪ್ಯಾಲೆಸ್ಟೀನಿಯನ್ನರು ಹಮಾಸ್‌ ಬಂಡುಕೋರರ ವಿರುದ್ಧ ಪ್ರತಿಭಟನೆ ನಡೆಸಿದರು&nbsp;</p></div>

ಇಸ್ರೇಲ್‌ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಒತ್ತಾಯಿಸಿ ಪ್ಯಾಲೆಸ್ಟೀನಿಯನ್ನರು ಹಮಾಸ್‌ ಬಂಡುಕೋರರ ವಿರುದ್ಧ ಪ್ರತಿಭಟನೆ ನಡೆಸಿದರು 

   

ಕೈರೊ: ಗಾಜಾದ ಉತ್ತರ ಭಾಗದಲ್ಲಿ ಹಮಾಸ್‌ ಬಂಡುಕೋರರ ವಿರುದ್ಧ ಸಹಸ್ರಾರು ಪ್ಯಾಲೆಸ್ಟೀನಿಯನ್ನರು ಎರಡನೇ ದಿನವೂ ಪ್ರತಿಭಟನೆ ಮುಂದುವರಿಸಿದರು.

ಹಮಾಸ್‌ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, 17 ತಿಂಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸಿದರು. ‘ಹಮಾಸ್‌ ಪತನವಾಗಲಿ’, ‘ಹಮಾಸ್‌ ತೊಲಗಲಿ’ ಎಂದು ಅವರು ಘೋಷಣೆಗಳನ್ನು ಕೂಗಿದರು.

ADVERTISEMENT

‘ಇದು ರಾಜಕೀಯ ಉದ್ದೇಶದ ಪ್ರತಿಭಟನೆಯಲ್ಲ, ಬದಲಿಗೆ ಜನರ ಜೀವ ಉಳಿಸುವ ಉದ್ದೇಶ ಹೊಂದಿದೆ’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಹೇಳಿದರು.

‘ನಾವು ಸಾವು, ನೋವು ಮತ್ತು ಸ್ಥಳಾಂತರವನ್ನು ನಿಲ್ಲಿಸ ಬಯಸುತ್ತೇವೆ. ನಮ್ಮಿಂದ ಇಸ್ರೇಲ್‌ ಅನ್ನು ತಡೆಯುವುದಕ್ಕೆ ಆಗುವುದಿಲ್ಲ. ಆದರೆ ಹಮಾಸ್‌ ಮೇಲೆ ಒತ್ತಡ ಹೇರಬಹುದು’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.