ADVERTISEMENT

ಕಸಿದುಕೊಳ್ಳಲು ಪನಾಮಾ ಕಾಲುವೆ ಅಮೆರಿಕ ನೀಡಿದ ಉಡುಗೊರೆ ಅಲ್ಲ: ಅಧ್ಯಕ್ಷ ಜೋಸ್

ಏಜೆನ್ಸೀಸ್
Published 22 ಜನವರಿ 2025, 10:18 IST
Last Updated 22 ಜನವರಿ 2025, 10:18 IST
<div class="paragraphs"><p>ಡೊನಾಲ್ಡ್ ಟ್ರಂಪ್, ಪನಾಮಾ ಕಾಲುವೆ, ಜೋಸ್ ರೌಲ್‌ ಮುಲಿನೊ</p></div>

ಡೊನಾಲ್ಡ್ ಟ್ರಂಪ್, ಪನಾಮಾ ಕಾಲುವೆ, ಜೋಸ್ ರೌಲ್‌ ಮುಲಿನೊ

   

ರಾಯಿಟರ್ಸ್ ಚಿತ್ರ

ಡಾವೋಸ್: ‘ಕಸಿದುಕೊಳ್ಳಲು ಪನಾಮಾ ಕಾಲುವೆಯು ಅಮೆರಿಕ ನೀಡಿದ ಉಡುಗೊರೆಯಲ್ಲ’ ಎಂದು ರಿಪಬ್ಲಿಕ್ ಆಫ್ ಪನಾಮಾದ ಅಧ್ಯಕ್ಷ ಜೋಸ್ ರೌಲ್‌ ಮುಲಿನೊ ಹೇಳಿದ್ದಾರೆ.

ADVERTISEMENT

ಕೆನಡಾ, ಗ್ರೀನ್‌ಲ್ಯಾಂಡ್‌ ಜತೆಗೆ ಪನಾಮಾ ಕಾಲುವೆಯನ್ನು ಅಮೆರಿಕಾಗೆ ಸೇರಿಸಿಕೊಳ್ಳುತ್ತೇನೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸ್ವಿಟ್ಜರ್ಲೆಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

‘ಟ್ರಂಪ್ ಹೇಳಿದ್ದನ್ನ ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಪನಾಮಾ ಕಾಲುವೆಯು ಪನಾಮಾಕ್ಕೇ ಸೇರಿದ್ದಾಗಿದ್ದು, ಮುಂದೆಯೂ ಪನಾಮಾದ್ದೇ ಆಗಿರಲಿದೆ. ಈ ಕಾಲುವೆಯು ಅಮೆರಿಕ ನೀಡಿದ ಯಾವುದೇ ರಿಯಾಯಿತಿ ಅಥವಾ ಉಡುಗೊರೆಯಲ್ಲ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.