ADVERTISEMENT

ಅಳಿವಿನಂಚಿನ ಕಕಾಪೊ ಗಿಳಿಗಳು ರೋಗಗ್ರಸ್ತ

ಏಜೆನ್ಸೀಸ್
Published 15 ಜೂನ್ 2019, 19:45 IST
Last Updated 15 ಜೂನ್ 2019, 19:45 IST
ಕಕಾಪೊ ಗಿಳಿ
ಕಕಾಪೊ ಗಿಳಿ   

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನಲ್ಲಿ ಕಂಡುಬರುವ ಅಳಿವಿನಂಚಿನ ಕಕಾಪೊ ಗಿಳಿಗಳು ಅಪರೂಪದ ಕಾಯಿಲೆಗೆ ತುತ್ತಾಗುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.

ವಿಶ್ವದಲ್ಲೆ ದಪ್ಪಗಿನ ಗಿಳಿಗಳು ಎಂಬ ಖ್ಯಾತಿಗೂ ಇವುಗಳು ಪಾತ್ರವಾಗಿವೆ.

ನ್ಯೂಜಿಲೆಂಡ್‌ನ ಕಾಡ್‌ಫಿಶ್‌ ದ್ವೀಪದಲ್ಲಿರುವ ಗಿಳಿಗಳಲ್ಲಿ ಶಿಲೀಂಧ್ರಗಳಿಂದ ಉಂಟಾಗುವ ಉಸಿರಾಟ ಸಂಬಂಧಿ ಕಾಯಿಲೆ (ಆಸ್ಪರ್ಜಿಲೋಸಿಸ್‌) ಕಾಣಿಸಿಕೊಂಡಿದೆ ಎಂದೂ ಡಿಪಾರ್ಟ್‌ಮೆಂಟ್‌ ಆಫ್‌ ಕನ್ಸರ್ವೇಷನ್‌ನ (ಡಿಒಸಿ) ಸಂಶೋಧಕರು ತಿಳಿಸಿದ್ದಾರೆ.

ADVERTISEMENT

ಈ ರೋಗ ಕಾಣಿಸಿಕೊಂಡಿರುವ 36 ಗಿಳಿಗಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಅವುಗಳಲ್ಲಿ 7 ಗಿಳಿಗಳು ಸಾವನ್ನಪ್ಪಿವೆ ಎಂದೂ ತಿಳಿಸಿದ್ದಾರೆ.

150 ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿವೆ ಎಂದು ತಿಳಿಯಲಾಗಿರುವ ಕಕಾಪೊ ಗಿಳಿಗಳ ಪ್ರಭೇದಕ್ಕೆ ಈ ಕಾಯಿಲೆಯಿಂದ ಅಪಾಯ ಎದುರಾಗಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.