ADVERTISEMENT

Maha Shivratri: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

ಪಿಟಿಐ
Published 15 ಫೆಬ್ರುವರಿ 2026, 16:20 IST
Last Updated 15 ಫೆಬ್ರುವರಿ 2026, 16:20 IST
ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ದಿನದಂದು, ಶಿವನ ವೇಷಧಾರಿ ಸಾಧುವೊಬ್ಬರಿಗೆ ಭಕ್ತರು ನಮಿಸಿದರು– ಎಎಫ್‌ಪಿ ಚಿತ್ರ 
ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ದಿನದಂದು, ಶಿವನ ವೇಷಧಾರಿ ಸಾಧುವೊಬ್ಬರಿಗೆ ಭಕ್ತರು ನಮಿಸಿದರು– ಎಎಫ್‌ಪಿ ಚಿತ್ರ    

ಕಠ್ಮಂಡು: ಮಹಾ ಶಿವರಾತ್ರಿಯ ಅಂಗವಾಗಿ ನೇಪಾಳದಾದ್ಯಂತ ಶಿವ ‌ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು.

ಬಾಗಮತಿ ನದಿ ದಡದಲ್ಲಿರುವ, ಐದನೇ ಶತಮಾನದ ಪಶುಪತಿನಾಥ ದೇವಸ್ಥಾನಕ್ಕೆ ಈ ಬಾರಿ ಎಂಟು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಶೇ 30ರಷ್ಟು ಮಂದಿ ಭಾರತೀಯರು. ಬೆಳಿಗಿನ ಜಾವ 2 ಗಂಟೆಗೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿತ್ತು.

ಕಳೆದ ವರ್ಷದ ಶಿವರಾತ್ರಿಯಂದು ಈ ದೇವಸ್ಥಾನಕ್ಕೆ 10 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು.

ADVERTISEMENT