ADVERTISEMENT

ಕಮಲಾ ಹ್ಯಾರಿಸ್‌ರನ್ನು ಅಭಿನಂದಿಸಿದ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್‌

ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಪೂರ್ಣ ಸಹಕಾರ ನೀಡುವ ಭರವಸೆ

ಪಿಟಿಐ
Published 16 ಜನವರಿ 2021, 5:22 IST
Last Updated 16 ಜನವರಿ 2021, 5:22 IST
ಮೈಕ್ ಪೆನ್ಸ್ – ಕಮಲಾ ಹ್ಯಾರಿಸ್
ಮೈಕ್ ಪೆನ್ಸ್ – ಕಮಲಾ ಹ್ಯಾರಿಸ್   

ವಾಷಿಂಗ್ಟನ್: ನಿರ್ಗಮಿತ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರು ತಮ್ಮ ಉತ್ತರಾಧಿಕಾರಿ, ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ಶುಭಾಶಯ ಕೋರಿದ್ದು, ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮೈಕ್‌ ಪೆನ್ಸ್ ಅವರು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ಣ ಸಹಾಯ ನೀಡುವುದಾಗಿ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪೆನ್ಸ್‌ ಮತ್ತು ಕಮಲಾ ಅವರು ಪರಸ್ಪರ ಮಾತನಾಡಿದ್ದಾರೆ. ನವೆಂಬರ್ 3ರ ಚುನಾವಣೆ ನಂತರ ಮೊದಲ ಬಾರಿಗೆ ದೂರವಾಣಿ ಮೂಲಕ ಪರಸ್ಪರ ಮಾತನಾಡಿದ್ದಾರೆ.

ADVERTISEMENT

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇಲ್ಲಿವರೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ನಡುವೆ ಯಾವುದೇ ಮಾತುಕತೆ, ಸಂವಾದ ಮತ್ತು ಭೇಟಿ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.