ADVERTISEMENT

₹62.43 ಕೋಟಿ ಮೌಲ್ಯದ ಬಿಡಿಭಾಗಗಳ ಖರೀದಿಗೆ ಅಮೆರಿಕ ಒಪ್ಪಿಗೆ

ಭಾರತದ ಬೇಡಿಕೆಗೆ ಸ್ಪಂದನೆ

ಪಿಟಿಐ
Published 2 ಅಕ್ಟೋಬರ್ 2020, 6:07 IST
Last Updated 2 ಅಕ್ಟೋಬರ್ 2020, 6:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಸಿ -130 ಜೆ ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳಿಗೆ ಅಗತ್ಯವಾದ ₹62.43 ಕೋಟಿ ಮೌಲ್ಯದ ಉಪಕರಣಗಳು, ಬಿಡಿಭಾಗಗಳು ಮತ್ತು ಇತರೆ ಸರಕುಗಳ ಖರೀದಿಸುವ ಭಾರತದ ಮನವಿಗೆ ಅಮೆರಿಕ ಒಪ್ಪಿಗೆ ನೀಡಿದೆ.

‘ಉದ್ದೇಶಿತ ಈ ವ್ಯಾಪಾರ ಅಮೆರಿಕ –ಭಾರತದ ಕಾರ್ಯತಂತ್ರ ಸಂಬಂಧವನ್ನು ಬಲಪಡಿಸಲು ಮತ್ತು ಪ್ರಮುಖ ರಕ್ಷಣಾ ಪಾಲುದಾರರ ಸುರಕ್ಷತೆಯನ್ನು ಸುಧಾರಿಸಲು ನೆರವಾಗುವ ಮೂಲಕ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತದೆ‘ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಅಮೆರಿಕ ಸಂಸತ್ತಿಗೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ ಬೇಡಿಕೆ ಸಲ್ಲಿಸಿರುವ ವಸ್ತುಗಳಲ್ಲಿ ಬಹುತೇಕ ವಿಮಾನಕ್ಕೆ ಬಳಕೆಯಾಗುವ ಬಿಡಿಭಾಗಗಳು ಇವೆ.

ADVERTISEMENT

ಅಮೆರಿಕವು ಸಿ -130 ಜೆ ಸೂಪರ್ ಹರ್ಕ್ಯುಲಸ್ ಸರಕು ವಿಮಾನ ಮಾರಾಟ ಮಾಡಿದ 17 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.