ADVERTISEMENT

20-40ರ ಹರೆಯದವರು ಕೋವಿಡ್ ವಾಹಕರಾಗಿರುತ್ತಾರೆ: ವಿಶ್ವ ಆರೋಗ್ಯ ಸಂಸ್ಥೆ

ರಾಯಿಟರ್ಸ್
Published 18 ಆಗಸ್ಟ್ 2020, 11:12 IST
Last Updated 18 ಆಗಸ್ಟ್ 2020, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 20, 30 ಮತ್ತು 40ರ ಹರೆಯದವರು ಕೊರೊನಾವೈರಸ್ ವಾಹಕರಾಗಿರುತ್ತಾರೆ. ಈ ವಯಸ್ಸಿನ ವ್ಯಕ್ತಿಗಳಿಗೆ ಕೊರೊನಾವೈರಸ್ ತಗುಲಿದೆ ಎಂದು ಗೊತ್ತಾಗದೇ ಅವರು ಇತರರಿಗೆ ರೋಗಗಳನ್ನು ಹರಡುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸೋಂಕಿಗೊಳಗಾಗುತ್ತಿರುವ ಕಿರಿಯ ವಯಸ್ಸಿನ ಜನರ ಪ್ರಮಾಣವು ಜಾಗತಿಕವಾಗಿ ಈ ತಿಂಗಳು ಏರಿಕೆಯಾಗಿದೆ. ಇದು ಜನನಿಬಿಡ ಪ್ರದೇಶಗಳಲ್ಲಿರುವ ದುರ್ಬಲ ವಿಭಾಗದವರಿಗೆ ಅಪಾಯವನ್ನುಂಟು ಮಾಡುತ್ತವೆ. ಆರೋಗ್ಯ ಸೇವೆಗಳು ಸರಿಯಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರಿಗೆ ಹೆಚ್ಚಿನ ಸಮಸ್ಯೆಯುಂಟಾಗುತ್ತದೆ.

ಈ ಸಾಂಕ್ರಾಮಿಕ ರೋಗವು ಬದಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ತಕೇಶಿ ಕಸೈ ಅವರು ಹೇಳಿದ್ದಾರೆ. 20, 30 ಮತ್ತು 40ರ ಹರೆಯದವರು ರೋಗ ಹರಡಲು ಕಾರಣರಾಗಿರುತ್ತಾರೆ.ಹಲವಾರು ಮಂದಿಗೆ ಸೋಂಕು ತಗುಲಿರುವುದೇ ಗೊತ್ತಿರುವುದಿಲ್ಲ. ಇದು ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಎಂದಿದ್ದಾರೆ ಕಸೈ.

ADVERTISEMENT

ಹೊಸ ಪ್ರಕರಣಗಳ ಸಂಖ್ಯೆ ಏರಿತೆ ಆಗುತ್ತಿದ್ದು ಕೆಲವು ರಾಷ್ಟ್ರಗಳು ಮತ್ತೆ ಲಾಕ್‍ಡೌನ್‌ ಜಾರಿ ಮಾಡಿವೆ. ಕೊರೊನಾ ಹೊಡೆತದಿಂದಾಗಿ ಆರ್ಥಿಕತೆ ಕುಸಿದಿದ್ದು, ಹಲವಾರು ಕಂಪನಿಗಳು ಕೊರೊನಾ ಲಸಿಕೆ ತಯಾರಿಕೆಯ ಓಟದಲ್ಲಿ ನಿರತವಾಗಿವೆ.ರಾಯಿಟರ್ಸ್ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಈವರೆಗೆ 2 ಕೋಟಿ ಸೋಂಕಿತರಿದ್ದು 7,70,000 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾವೈರಸ್ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದ ವಿಯೆಟ್ನಾಂನಲ್ಲಿಯೂ ಮತ್ತೆ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ.
ಮತ್ತೊಮ್ಮೆ ಸೋಂಕು ಏರಿಕೆಯಾಗುತ್ತಿರುವುದು ಏಷ್ಯಾ ಪೆಸಿಫಿಕ್‌ನಲ್ಲಿ ಈ ಸಾಂಕ್ರಾಮಿಕ ರೋಗ ಹೊಸ ಹಂತಕ್ಕೆ ತಲುಪಿರುವುದರ ಸೂಚನೆ ಎಂಬುದು ನಮ್ಮ ನಂಬಿಕೆ ಎಂದಿದ್ದಾರೆ ಕಸೈ.

ಸೋಂಕುಗಳನ್ನು ನಿರ್ವಹಿಸಲು ಆರಂಭಿಕ ಪತ್ತೆ ಮತ್ತು ಪ್ರತಿಕ್ರಿಯೆಯನ್ನು ಒಟ್ಟುಗೂಡಿಸುವ ಮೂಲಕ ದೇಶಗಳು ಜೀವನ ಮತ್ತು ಆರ್ಥಿಕತೆಗೆ ಪೆಟ್ಟು ಬೀಳುವುದನ್ನು ಕಡಿಮೆ ಮಾಡಲು ಸಮರ್ಥವಾಗಿವೆ. ರೂಪಾಂತರಗಳನ್ನು ಗಮನಿಸಿದ್ದರೂ, ಆರೋಗ್ಯ ಸಂಸ್ಥೆ ಇನ್ನೂ ವೈರಸ್ ಅನ್ನು ತುಲನಾತ್ಮಕವಾಗಿ ಸ್ಥಿರ ಎಂದು ಕಂಡುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಅದೇ ವೇಳೆ ಲಸಿಕೆ ತಯಾರಿಸುವಾಗ ಅಗತ್ಯವಿರುವ ಎಲ್ಲ ಸಂಶೋಧನೆ ಮತ್ತು ಅಭಿವೃದ್ಧಿ ಹಂತಗಳನ್ನು ಅನುಸರಿಸುವಂತೆ ಡಬ್ಲ್ಯುಎಚ್‍ಒ ಔಷಧಿ ತಯಾರಕರಿಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.