ADVERTISEMENT

ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕ್‌ನಲ್ಲಿ ತರಬೇತಿ: ಮುಷರಫ್

ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು ಎಂದ ಮಾಜಿ ಅಧ್ಯಕ್ಷ

ಏಜೆನ್ಸೀಸ್
Published 14 ನವೆಂಬರ್ 2019, 13:19 IST
Last Updated 14 ನವೆಂಬರ್ 2019, 13:19 IST
   

ಇಸ್ಲಾಮಾಬಾದ್:ಜಮ್ಮು–ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ‘ಹೀರೋ’ಗಳು. ಒಸಮಾ ಬಿನ್ ಲಾಡೆನ್, ಅಯ್ಮಾನ್ ಅಲ್ ಜವಾಹಿರಿ, ಜಲಾಲುದ್ದೀನ್ ಹಖ್ಖಾನಿ ಮತ್ತಿತರರು ಪಾಕಿಸ್ತಾನದ ‘ಹೀರೋ’ಗಳು ಎಂದೂ ಅವರು ಸಂದರ್ಶನವೊಂದರಲ್ಲಿ ಬಣ್ಣಿಸಿದ್ದಾರೆ.

ಮುಷರಫ್ ಅವರ ಸಂದರ್ಶನದ ವಿಡಿಯೊವನ್ನು ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಬುಧವಾರ ಟ್ವೀಟ್ ಮಾಡಿದ್ದಾರೆ. ಇದು 2015ರಸಂದರ್ಶನದ ಹಳೆ ವಿಡಿಯೊವಾಗಿದೆ.

ADVERTISEMENT

‘ಪಾಕಿಸ್ತಾನಕ್ಕೆ ಬರುವ ಕಾಶ್ಮೀರಿಗಳಿಗೆ ಇಲ್ಲಿ ‘ಹೀರೋ’ಗಳಿಗೆ ನೀಡುವಂತಹ ಸ್ವಾಗತ ನೀಡಲಾಗುತ್ತಿದೆ. ಅವರಿಗೆ ನಾವು ತರಬೇತಿ ಮತ್ತು ಬೆಂಬಲ ನೀಡುತ್ತೇವೆ. ಅವರನ್ನು ನಾವು ಭಾರತೀಯ ಸೇನೆ ಜತೆ ಸೆಣಸಾಡುವ ಮುಜಾಹಿದೀನ್‌ಗಳೆಂದು ಪರಿಗಣಿಸುತ್ತೇವೆ’ ಎಂದುಮುಷರಫ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.