ADVERTISEMENT

ಆತ್ಮಾಹುತಿ ಬಾಂಬ್ ದಾಳಿ ಸಂಚು ನಡೆದಿದ್ದು ಅಫ್ಗಾನಿಸ್ತಾನದಲ್ಲಿ: ಪಾಕಿಸ್ತಾನ

ಪಿಟಿಐ
Published 7 ಫೆಬ್ರುವರಿ 2023, 14:38 IST
Last Updated 7 ಫೆಬ್ರುವರಿ 2023, 14:38 IST
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ನಡೆದ ಬಳಿಕದ ದೃಶ್ಯ– ಎಎಫ್‌ಪಿ ಚಿತ್ರ
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ನಡೆದ ಬಳಿಕದ ದೃಶ್ಯ– ಎಎಫ್‌ಪಿ ಚಿತ್ರ   

ಪೆಶಾವರ (ಪಿಟಿಐ): ಇಲ್ಲಿಯ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯ ಸಂಚನ್ನು ಅಫ್ಗಾನಿಸ್ತಾನದಲ್ಲಿ ರೂಪಿಸಲಾಗಿದ್ದು, ನೆರೆಯ ದೇಶದ ಗುಪ್ತಚರ ಸಂಸ್ಥೆಯಿಂದ ಧನಸಹಾಯ ದೊರಕಿದೆ ಎಂದು ತನಿಖೆ ನಡೆಸುತ್ತಿರುವ ಪಾಕಿಸ್ತಾನದ ಕಾನೂನು ಜಾರಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಜ.30ರಂದು ಪ್ರಾರ್ಥನೆ ವೇಳೆ ಮಸೀದಿಯಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 101 ಮಂದಿ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ದುರಂತಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ 17 ಮಂದಿ ಶಂಕಿತರನ್ನೂ ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.