ADVERTISEMENT

ಸೈಬರ್ ದಾಳಿ: ಫೈಜರ್ ಲಸಿಕೆ ದಾಖಲೆಗಳಿಗೆ ಕನ್ನ

ರಾಯಿಟರ್ಸ್
Published 10 ಡಿಸೆಂಬರ್ 2020, 7:17 IST
Last Updated 10 ಡಿಸೆಂಬರ್ 2020, 7:17 IST
ಫೈಜರ್ ಲಸಿಕೆ
ಫೈಜರ್ ಲಸಿಕೆ   

ಲಂಡನ್: ಬ್ರಿಟನ್ ಸೇರಿದಂತೆ ಕೆಲ ದೇಶಗಳಲ್ಲಿ ಅನುಮೋದನೆ ಪಡೆದು ಸಾಮೂಹಿಕ ಲಸಿಕಾ ಅಭಿಯಾನಕ್ಕೆ ನಾಂದಿ ಹಾಡಿದ್ದ ಫೈಜರ್ ಬಯೋ ಅಂಡ್ ಟೆಕ್ ಕೊರೋನಾ ಲಸಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಯೂರೋಪಿಯನ್ ಮೆಡಿಸಿನ್ ಏಜೆನ್ಸಿ ಸರ್ವರ್ ಮೇಲೆ ಸೈಬರ್ ದಾಳಿ ನಡೆಸಿ ಕಾನೂನು ಬಾಹಿರವಾಗಿ ಹ್ಯಾಕ್ ಮಾಡಲಾಗಿದೆ ಎಂದು ಯೂರೋಪಿಯನ್ ಔಷಧಿ ನಿಯಂತ್ರಣ ಸಂಸ್ಥೆ ತಿಳಿಸಿದೆ.

ನಮ್ಮ ಲಸಿಕೆಗೆ ಸಂಬಂಧಿಸಿದ ದಾಖಲೆಯನ್ನ ಕದಿಯಲಾಗಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಯ ಲೋಪ ಆಗಿಲ್ಲ ಎಂದು ಫೈಜರ್ ಮತ್ತು ಬಯೋ–ಟೆಕ್ ತಿಳಿಸಿದೆ.

"ನಮ್ಮ ವೈಯಕ್ತಿಕ ಡೇಟಾ ಹ್ಯಾಕ್ ಆಗಿರುವ ಬಗ್ಗೆ ನಮಗೆ ತಿಳಿದಿಲ್ಲ" ಫೈಜರ್ ಹೇಳಿಕೆಯಲ್ಲಿ ತಿಳಿಸಿದೆ. "ಅಧ್ಯಯನದಲ್ಲಿ ಭಾಗವಹಿಸಿದ್ದ ಯಾರಾದರೂ ಡೇಟಾ ಕದ್ದಿರಬಹುದೇ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಮುಂದಿನ ಯೋಜನೆಗಳ ಮೇಲೆ ಸೈಬರ್ ದಾಳಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತನಿಖೆ ನಡೆಸುತ್ತಿರುವ ಇಎಂಎ ಭರವಸೆ ನೀಡಿದೆ" ಎಂದು ಬಯೋ ಅಂಡ್ ಟೆಕ್ ತಿಳಿಸಿದೆ.

ADVERTISEMENT

ಫೈಜರ್ ಲಸಿಕೆಗೆ ವಿಶೇಷ ಅನುಮೋದನೆ ನೀಡುವ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಂದರ್ಭಕ್ಕಿಂತ ಕೆಲ ವಾರಗಳ ಹಿಂದಿನಿಂದಲೂ ನಾವು ಸೈಬರ್ ದಾಳಿ ಎದುರಿಸಿದ್ದೇವೆ ಎಂದು ಯೂರೋಪಿನ ಔಷಧಿ ನಿಯಂತ್ರಕ ತಿಳಿಸಿದೆ.

ಫೈಜರ್ ಲಸಿಕೆ ದಾಖಲೆಗಳ ಮೇಲಿನ ಸೈಬರ್ ದಾಳಿ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿರುವ ಆಮ್‌ಸ್ಟರ್ಡಮ್ ಮೂಲದ ಇಎಂಎ, ದಾಳಿ ಯಾವಾಗ ನಡೆದಿದೆ? ಕೋವಿಡ್19 ಲಸಿಕೆಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆಯೇ? ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿಲ್ಲ.

ಸೈಬರ್ ದಾಳಿ ಕುರಿತ ತನಿಖೆ ನಡೆಸುವ ಇಎಂಎಯು ಕಾನೂನು ವಿಭಾಗದ ಸೇರಿದಂತೆ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ಕೂಡಲೇ ತನಿಖೆ ಆರಂಭಿಸಿದೆ ಎಂದು ಇಎಂಎ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.