ADVERTISEMENT

ಅಮೆರಿಕ: ಕೊನೆ ಹಂತದ ಸ್ಪರ್ಧೆಯಲ್ಲಿ ಫೈಝರ್ ಕೋವಿಡ್ ಲಸಿಕೆ

ಲಸಿಕೆ ದತ್ತಾಂಶ ಪರಿಶೀಲನಾ ಸಮಿತಿ

ಏಜೆನ್ಸೀಸ್
Published 10 ಡಿಸೆಂಬರ್ 2020, 10:45 IST
Last Updated 10 ಡಿಸೆಂಬರ್ 2020, 10:45 IST
   

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್‌ 19 ಸಾಂಕ್ರಾಮಿಕಕ್ಕೆ ಲಸಿಕೆ ಪೂರೈಸುವ ಸ್ಪರ್ಧೆಯಲ್ಲಿ ಮುಂದಿರುವ ಫೈಝರ್ ಕಂಪನಿ, ಕೊನೆಯ ಹಂತದ ಅಡಚಣೆಯೊಂದನ್ನು ಎದುರಿಸುತ್ತಿದೆ ಎಂದು ಕಂಪನಿಯ ದತ್ತಾಂಶಗಳನ್ನು ಪರಿಶೀಲಿಸುತ್ತಿರವ ಸಮಿತಿಯ ತಜ್ಞರೊಬ್ಬರು ತಿಳಿಸಿದ್ದಾರೆ.

ಕೋವಿಡ್‌-19 ವಿರುದ್ಧದ ಲಸಿಕೆಯ ನಿರ್ಧಾರದ ವಿಷಯದಲ್ಲಿ ಅಮೆರಿಕ ಅಂತಿಮ ಹಂತ ತಲುಪಿದೆ. ಗುರುವಾರ ನಡೆದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯ(ಎಫ್‌ಡಿಎ) ಲಸಿಕೆ ಸಲಹಾ ಸಮಿತಿ ಸಭೆಯಲ್ಲೂ ಈ ಕುರಿತು ಚರ್ಚೆಯಾಗಿದೆ.

ಎಫ್‌ಡಿಎ ಸಭೆ ಒಂದು ರೀತಿ ವೈಜ್ಞಾನಿಕ ನ್ಯಾಯಾಲಯದಂತೆ ನಡೆದಿದ್ದು, ಲಸಿಕೆಗಳ ದತ್ತಾಂಶದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಲಸಿಕೆಯ ಡೋಸೇಜ್‌ ಎಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ, ಸದ್ಯ ತುರ್ತು ಬಳಕೆಗೆ ಸರಿ ಹೋಗುತ್ತದೆಯೇ ಎಂಬ ಇತ್ಯಾದಿ ಪ್ರಮುಖ ಮಾತಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.