ADVERTISEMENT

ಫೈಝರ್ ಕೋವಿಡ್‌–19 ಲಸಿಕೆಗೆ ಇದೇ ವಾರ ಬ್ರಿಟನ್‌ನಿಂದ ಅನುಮತಿ ಸಾಧ್ಯತೆ: ವರದಿ

ರಾಯಿಟರ್ಸ್
Published 23 ನವೆಂಬರ್ 2020, 2:33 IST
Last Updated 23 ನವೆಂಬರ್ 2020, 2:33 IST
ಫೈಝರ್–ಬಯೋನ್‌ಟೆಕ್‌ನ ಕೋವಿಡ್‌–19 ಲಸಿಕೆ
ಫೈಝರ್–ಬಯೋನ್‌ಟೆಕ್‌ನ ಕೋವಿಡ್‌–19 ಲಸಿಕೆ   

ರಾಯಿಟರ್ಸ್‌: ಫೈಝರ್–ಬಯೋನ್‌ಟೆಕ್‌ನ ಕೋವಿಡ್‌–19 ಲಸಿಕೆ ಬಳಕೆಗೆ ಬ್ರಿಟನ್‌ ಇದೇ ವಾರದಲ್ಲಿ ಅನುಮತಿ ನೀಡುವ ಸಾಧ್ಯತೆ ಇದೆ. ಅಮೆರಿಕದ ಅನುಮೋದನೆಗಿಂತಲೂ ಮುಂಚೆಯೇ ಬ್ರಿಟನ್‌ನಿಂದ ಅನುಮತಿ ಸಿಗಬಹುದಾಗಿದೆ ಎಂದು ಭಾನುವಾರ ಟೆಲಿಗ್ರಾಫ್‌ ಸುದ್ದಿ ಜಾಲತಾಣ ವರದಿ ಮಾಡಿದೆ.

ಬ್ರಿಟಿಷ್‌ ಔಷಧ ನಿಯಂತ್ರಕರು ಫೈಝರ್‌ ಮತ್ತು ಬಯೋನ್‌ಟೆಕ್‌ ಅಭಿವೃದ್ಧಿ ಪಡಿಸಿರುವ ಕೋವಿಡ್‌–19 ಲಸಿಕೆಯ ಅಧಿಕೃತ ಮೌಲ್ಯಮಾಪನ ಆರಂಭಿಸಲಿದೆ. ಡಿಸೆಂಬರ್‌ 1ರಿಂದ ಲಸಿಕೆ ನಿರ್ವಹಣೆಗೆ ಸಂಬಂಧಿಸಿದಂತೆ ಸಜ್ಜಾಗಿರುವಂತೆ 'ರಾಷ್ಟ್ರೀಯ ಆರೋಗ್ಯ ಸೇವೆಗೆ' ತಿಳಿಯಪಡಿಸಲಾಗಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಲಸಿಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ಡಿಸೆಂಬರ್‌ 10ರಂದು ಸಭೆ ಸೇರಲಿದೆ.

ADVERTISEMENT

ಬ್ರಿಟನ್‌ನ ಔಷಧ ನಿಯಂತ್ರಣ ಸಂಸ್ಥೆ ಎಂಎಚ್‌ಆರ್‌ಎ ಲಸಿಕೆಗೆ ಅನುಮೋದನೆ ನೀಡಿದರೆ, ವರ್ಷಾಂತ್ಯಕ್ಕೆ 1 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಬ್ರಿಟನ್‌ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬ್ರಿಟನ್‌ 4 ಕೋಟಿ ಡೋಸ್‌ ಲಸಿಕೆಗಾಗಿ ಬೇಡಿಕೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.