ADVERTISEMENT

ಫಿಲಿಡೆಲ್ಫಿಯಾದಲ್ಲಿ ಭೀಕರ ಅಗ್ನಿ ದುರಂತ: 8 ಮಕ್ಕಳು ಸೇರಿ 12 ಜನ ಸಾವು

ಏಜೆನ್ಸೀಸ್
Published 6 ಜನವರಿ 2022, 9:11 IST
Last Updated 6 ಜನವರಿ 2022, 9:11 IST
ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರು ಜಮಾಯಿಸಿದ್ದರು. ಚಿತ್ರ–ಎಪಿ
ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರು ಜಮಾಯಿಸಿದ್ದರು. ಚಿತ್ರ–ಎಪಿ   

ಫಿಲಿಡೆಲ್ಫಿಯಾ: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಫಿಲಿಡೆಲ್ಪಿಯಾ ನಗರದಲ್ಲಿಬುಧವಾರ ಭೀಕರ ಅಗ್ನಿ ದುರಂತ ಸಂಭವಿಸಿದೆ.

ನಗರದ ವಸ್ತು ಸಂಗ್ರಹಾಲಯದ ಬಳಿಯ 23 ನೇ ಬೀದಿಯ ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಘಟಿಸಿದ ಅಗ್ನಿ ದುರಂತದಲ್ಲಿ 8 ಮಕ್ಕಳು ಸೇರಿದಂತೆ 12 ಜನ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕಟ್ಟಡದಲ್ಲಿ 26 ಜನ ವಾಸಿಸುತ್ತಿದ್ದರು. ಸಾವು ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ದುರಂತಫಿಲಿಡೆಲ್ಪಿಯಾ ನಗರದಲ್ಲಿ ಶತಮಾನದ ಅತಿದೊಡ್ಡ ಅಗ್ನಿದುರಂತ ಎಂದು ಹೇಳಲಾಗಿದೆ.ಕಟ್ಟಡದಲ್ಲಿ ನಾಲ್ಕು ಅಗ್ನಿಶಾಮಕ ಅಲರಾಂಗಳಿದ್ದವು. ಆದರೆ, ಅವು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.