ADVERTISEMENT

ನಿಂತ ವಿಮಾನಗಳಿಗೆ ಡಿಕ್ಕಿ: ಕಿರುವಿಮಾನದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 15:56 IST
Last Updated 12 ಆಗಸ್ಟ್ 2025, 15:56 IST
ವಿಮಾನ ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡಿತು (ಎಪಿ/ಪಿಟಿಐ ಚಿತ್ರ)
ವಿಮಾನ ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡಿತು (ಎಪಿ/ಪಿಟಿಐ ಚಿತ್ರ)   

ಕಲಿಸ್ಪೆಲ್ (ಅಮೆರಿಕ): ಮಾಂಟನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಕಿರು ವಿಮಾನವೊಂದು ನಿಲ್ಲಿಸಿದ್ದ ಮತ್ತೊಂದು ವಿಮಾನಕ್ಕೆ ಸೋಮವಾರ ಡಿಕ್ಕಿ ಹೊಡೆದಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿತು. ಆದರೆ ಅವಘಡದಿಂದ ಯಾವುದೇ ಸಾವು–ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕ ಎಂಜಿನ್‌ನ ವಿಮಾನದಲ್ಲಿ ನಾಲ್ಕು ಜನರಿದ್ದರು. ಪೈಲಟ್‌ ನಿಯಂತ್ರಣ ತಪ್ಪಿದ್ದರಿಂದ ಅದು ರನ್‌ವೇಗೆ ಬಡಿದು, ಅಲ್ಲಿ ನಿಲ್ಲಿಸಿದ್ದ ಹಲವು ವಿಮಾನಗಳಿಗೆ ಡಿಕ್ಕಿ ಹೊಡೆಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT