ADVERTISEMENT

Modi In Croatia: ಕ್ರೊವೇಷ್ಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ

ಪಿಟಿಐ
Published 18 ಜೂನ್ 2025, 13:26 IST
Last Updated 18 ಜೂನ್ 2025, 13:26 IST
   

ಝಾಗ್ರೆಬ್: ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕ್ರೊವೇಷ್ಯಾಕ್ಕೆ ಭೇಟಿ ನೀಡಿದ್ದಾರೆ. ಆ ಮೂಲಕ ಈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಅವರದ್ದಾಗಿದೆ.

‘ಕ್ರೊವೇಷ್ಯಾ ಗಣರಾಜ್ಯಕ್ಕೆ ನನ್ನ ಭೇಟಿ ಮತ್ತು ಅಧ್ಯಕ್ಷ ಜೋರನ್ ಮಿಲನೋವಿಕ್, ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರೊಂದಿಗಿನ ಸಭೆಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಮೋದಿ ಅವರು ಭಾನುವಾರ ನವದೆಹಲಿಯಿಂದ ನಿರ್ಗಮಿಸುವ ಮೊದಲು ಹೇಳಿಕೆಯಲ್ಲಿ ತಿಳಿಸಿದ್ದರು.

‘ಉಭಯ ದೇಶಗಳು ಶತಮಾನಗಳಷ್ಟು ಹಳೆಯದಾದ ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಕ್ರೊವೇಷ್ಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರ ಮೊದಲ ಭೇಟಿಯಾಗಿರುವುದರಿಂದ, ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಇದು ಹೊಸ ಮಾರ್ಗಗಳನ್ನು ತೆರೆಯುತ್ತದೆ’ ಎಂದು ಹೇಳಿದ್ದರು.

ADVERTISEMENT

ಕ್ರೊವೇಷ್ಯಾಕ್ಕೆ ಮುನ್ನ ಕೆನಡಾಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಕೆನಡಾ ಪ್ರಧಾನಿ ಕಾರ್ನಿ ಸೇರಿದಂತೆ ಪ್ರಮುಖ ಜಾಗತಿಕ ನಾಯಕರೊಂದಿಗೆ ಭದ್ರತೆ, ತಂತ್ರಜ್ಞಾನ, ನಾವೀನ್ಯತೆ ಕುರಿತ ಪ್ರಮುಖ ವಿಷಯಗಳನ್ನು ಚರ್ಚಿಸಿದ್ದಾರೆ.

ಕೆನಡಾ ಭೇಟಿಗೆ ಮೊದಲು ಮೋದಿ ಸೈಪ್ರಸ್‌ಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.