ಬೀಜಿಂಗ್: ಚೀನಾದಲ್ಲಿ ಭಾರತದ ಸಾಂಸ್ಕೃತಿಕ ಸಂಪ್ರದಾಯಗಳು, ವೇದಾಂತ ಮತ್ತು ಯೋಗವನ್ನು ಜನಪ್ರಿಯಗೊಳಿಸಲು ಯತ್ನಿಸುತ್ತಿರುವ ಚೀನಾದ ತತ್ವಜ್ಞಾನಿ ಮತ್ತು ಪ್ರೊಫೆಸರ್ ವಾಂಗ್ ಝಿಚೆಂಗ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
ಝೆಜಿಯಾಂಗ್ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಬರೆದ ಪತ್ರವನ್ನು ಭಾರತದ ರಾಯಭಾರಿ ಪ್ರತೀಕ್ ಮಾಥೂರ್ ಝೆಚೆಂಗ್ ಅವರಿಗೆ ಹಸ್ತಾಂತರಿಸಿದರು.
ಈ ಪತ್ರದಲ್ಲಿ ಭಾರತೀಯ ತತ್ವಶಾಸ್ತ್ರೀಯ ಸಿದ್ಧಾಂತದ ಸಂಪ್ರದಾಯಗಳ ಬಗ್ಗೆ ಅವರ ಜ್ಞಾನ, ವಿಶೇಷವಾಗಿ ಯೋಗ ಮತ್ತು ವೇದಾಂತದ ಬಗ್ಗೆ ಅವರ ಕಾರ್ಯದ ಬಗ್ಗೆ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಚೀನಾ ಪ್ರವಾಸ ಕೈಗೊಂಡಿದ್ದ ಮೋದಿ ಅವರಿಗೆ ವಾಂಗ್ ಅವರು ತಾವೇ ಅನುವಾದ ಮಾಡಿದ ಭಗವದ್ಗೀತಾ ಪುಸ್ತಕವನ್ನು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.